Advertisement

ನಿಟ್ಟೆ ಫಿಸಿಯೋಥೆರಪಿ ಕಾಲೇಜು: ಬೀಳ್ಕೊಡುಗೆ ಸಮಾರಂಭ

01:58 AM May 05, 2019 | Sriram |

ದೇರಳಕಟ್ಟೆ: ಖುಷಿ,ದುಃಖ ಗಳ ಸಮ್ಮಿಲನ ಬೀಳ್ಕೊಡುಗೆ ಆಗಿದ್ದು, ಇಂತಹ ಸನ್ನಿವೇಶವನ್ನು ಅದ್ದೂರಿಯಾಗಿ ಆಯೋಜಿಸಿದ ಸಂಘಟಕರ ಕಾರ್ಯ ಶ್ಲಾಘನೀಯ ಎಂದು ಕಣ್ಣೂರು ಎಕೆಜಿ ಮೆಮೋರಿಯಲ್‌ ಕೋ-ಆಪರೇಟಿವ್‌ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಹಾಗೂ ಕೇರಳ ವೈದ್ಯಕೀಯ ವಿಶ್ವವಿದ್ಯಾನಿಲಯಗಳ ಸೆನೆಟ್‌ ಸದಸ್ಯ ಡಾ| ಕಾಮರಾಜ ಬಿ.ಹೇಳಿದರು.

Advertisement

ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ 2015-16ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ, ಮೂರನೇ ವರ್ಷದ ಬಿಪಿಟಿ ವಿದ್ಯಾರ್ಥಿಗಳು,ಸಿಬಂದಿಯೇತರರ ವತಿ ಯಿಂದ ದೇರಳಕಟ್ಟೆ ಕ್ಷೇಮ ಆಡಿಟೋರಿಯಂನಲ್ಲಿ ಮಂಗಳವಾರ ಆಯೋ  ಜಿ  ಸ ಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಫಿಸಿಯೋಥೆರಪಿಸ್ಟ್‌ಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಯಶಸ್ಸು ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ನಿಟ್ಟೆ ವಿ.ವಿ. ಕುಲಸಚಿವೆ ಅಲ್ಕಾ ಕುಲಕರ್ಣಿ ಮಾತನಾಡಿ,ಜ್ಞಾನ, ಕೌಶಲಾವೃದ್ಧಿ, ಸ್ನೇಹ ಸಂಪಾದನೆಯ ತರಬೇತಿಯನ್ನು ಪಡೆದು ಹೊರಹೋಗುತ್ತಿರುವ ವಿದ್ಯಾ ರ್ಥಿ ಗಳು ಭವಿಷ್ಯದಲ್ಲಿ ನಿಟ್ಟೆ ವಿ.ವಿ.ಯ ರಾಯಭಾರಿಯಾಗಿ ಕಾರ್ಯ ನಿರ್ವ ಹಿಸಿ. ಈ ಮೂಲಕ ಕಲಿತ ಸಂಸ್ಥೆಗೆ ಗೌರವವನ್ನು ಸಂದಾಯ ಮಾಡಿ ದಂತಾಗುವುದು ಎಂದರು. ಈ ಸಂದರ್ಭ ಡಾ| ಸುಚೇತಾ ಉಪ ಸ್ಥಿತರಿದ್ದರು. ವಿದ್ಯಾರ್ಥಿನಿ ಯರಾದ ಸಂಯುಕ್ತ ಹೆಗ್ಡೆ, ಅನಿತಾ ಪೌಲ್‌ ಅನುಭವ ಹಂಚಿಕೊಂಡರು. ನಿಟ್ಟೆ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ| ಧಾನೇಶ್‌ ಕುಮಾರ್‌ ಸ್ವಾಗತಿಸಿದರು. ಉಪನ್ಯಾಸಕ ಪುರುಷೋತ್ತಮ ಸಿಪ್ಲಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next