ಇದಕ್ಕಾಗಿ ನಿತೀಶ್ ಕುಮಾರ್ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಅರ್ಪಿಸಬೇಕು.
Advertisement
ಬಿಹಾರ ಚುನಾವಣೆಯಲ್ಲಿ ತೀವ್ರ ಹಣಾಹಣಿಯ ನಡುವೆ ಎನ್‌ಡಿಎ ಸಾಧಿಸಿದ ಗೆಲುವಿನ ಶ್ರೇಯಸ್ಸು ಮೋದಿಯವರಿಗೆ ಸಲ್ಲಬೇಕು. ಏಕೆಂದರೆ ಮೋದಿ ನಿತೀಶ್ ಕುಮಾರ್ ವಿರುದ್ಧ ಸೃಷ್ಟಿಯಾಗಿದ್ದ ಅಧಿಕಾರ ವಿರೋಧಿ ಅಲೆಯನ್ನು ತಡೆದರು. ಅಲ್ಲದೇ ಸಾಂಕ್ರಾಮಿಕದ ಕಾರಣ ಸೃಷ್ಟಿಯಾಗಿದ್ದ ವಲಸಿಗರ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನಿತೀಶ್‌ರ ವೈಫಲ್ಯದ ಬಗ್ಗೆ ಜನರಲ್ಲಿದ್ದ ಸಿಟ್ಟನ್ನೂ ಅವರು ಶಮನಗೊಳಿಸಿದರು.
Related Articles
ತಗ್ಗುತ್ತಿರುವುದು ಗೋಚರಿಸಿತು.
Advertisement
ಮೊದಲ ಹಂತದ ಮತದಾನಕ್ಕೂ ಒಂದು ವಾರ ಮುನ್ನ ತೇಜಸ್ವಿ ಯಾದವ್ ನಿತೀಶರಿಗೆ ಪ್ರಬಲ ಪೈಪೋಟಿ ಎದುರೊಡ್ಡಲಿದ್ದಾರೆ ಎನ್ನುವುದು ಸ್ಪಷ್ಟವಾಯಿತು. ನಿರೀಕ್ಷೆಯಂತೆಯೇ, ಮಹಾಘಟಬಂಧನ್ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿಸಿತು. ಫಲಿತಾಂಶಗಳ ಅವಲೋಕನ ಮಾಡಿ ನೋಡಿದರೆ, ಆ ಹಂತದಲ್ಲಿ ಮಹಾಘಟಬಂಧನ್ ಮತ ಗಳಿಕೆ ಪ್ರಮಾಣ 67.6 ಪ್ರತಿಶತದಷ್ಟಿದ್ದರೆ, ಎನ್‌ಡಿಎ 29.6 ಪ್ರತಿಶತವಷ್ಟೇ ಪಡೆದಿತ್ತು.
ಮೊದಲನೇ ಹಂತದಲ್ಲಿ ಮಹಾಘಟಬಂಧನ್ ಭರ್ಜರಿ ಪ್ರದರ್ಶನ ತೋರಿದೆ ಎನ್ನುವ ಎಚ್ಚರಿಕೆಯ ಗ್ರೌಂಡ್ ರಿಪೋರ್ಟ್‌ಗಳು ಬರುತ್ತಿದ್ದಂತೆಯೇ, ಬಿಜೆಪಿ ಕೇಂದ್ರೀಯ ನಾಯಕತ್ವ ಹಾಗೂ ಮೋದಿ, ಎನ್‌ಡಿಎ ಪ್ರಚಾರಗಳಿಗೆ ಶಕ್ತಿ ತುಂಬಲು ನಿರ್ಧರಿಸಿದರು. ಮೋದಿ ತಮ್ಮ ಹೆಸರಾಂತ ವಾಗ್‌ವೈಖರಿ ಬಳಸಿ ಎನ್‌ಡಿಎ ಬೇರುಮಟ್ಟದ ಕೆಲಸಗಾರರಲ್ಲಿ ಹುರುಪು ತುಂಬಿದರು. ಅಷ್ಟೇ ಅಲ್ಲದೇ, ತೇಜಸ್ವಿ ವಿರುದ್ಧ ದಾಳಿಯನ್ನೂ ಹರಿತಗೊಳಿಸಿದರು. 1990ರಿಂದ 2005ರ ನಡುವೆ ಬಿಹಾರದಲ್ಲಿ ಆರ್‌ಜೆಡಿ ಆಡಳಿತದಲ್ಲಿ ಸೃಷ್ಟಿಯಾಗಿದ್ದ ಕರಾಳ ದಿನಗಳನ್ನು ಮತದಾರರಿಗೆ ನೆನಪುಮಾಡಿಕೊಟ್ಟರು. ಹೇಗೆ ಆರ್‌ಜೆಡಿಯ “ಜಂಗಲ್ ರಾಜ್’ನ ಅವಧಿಯು ಕೊಲೆ, ಸುಲಿಗೆ, ಅಪಹರಣ, ವ್ಯಾಪಕ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ತುಂಬಿಹೋಗಿತ್ತು ಎಂದು ನೆನಪಿಸಿ, ನಿತೀಶ್ ವಿರುದ್ಧ ಸೃಷ್ಟಿಯಾಗಿದ್ದ ಅಧಿಕಾರ ವಿರೋಧಿ ಅಲೆಯಿಂದ ಜನರ ಗಮನ ಬೇರೆಡೆ ಸೆಳೆದರು.
ಮೋದಿ ತೇಜಸ್ವಿ ಯಾದವ್‌ರನ್ನು “ಜಂಗಲ್ ಕಾ ಯುವರಾಜ್’ ಎಂದು ಕರೆದು, ತೇಜಸ್ವಿಯವರ ತಂದೆ ಲಾಲೂರ ಸಮಯದಲ್ಲಿ ನಡೆದಿದ್ದ ವ್ಯಾಪಕ ಭ್ರಷ್ಟಾಚಾರವನ್ನು ಹೈಲೈಟ್ ಮಾಡಿದರು. ತೇಜಸ್ವಿ “ಆ ದಿನಗಳ’ ನೆನಪನ್ನು ಮರೆಮಾಚುವ ಸಲುವಾಗಿ, ಆರ್‌ಜೆಡಿಯ ಪ್ರಚಾರ ಪತ್ರಗಳಲ್ಲಿ ತಮ್ಮ ಪೋಷಕರ ಫೋಟೋಗಳನ್ನೂ ಹಾಕಲಿಲ್ಲ. ಆದರೆ ಮೋದಿ ಜಾಗರೂಕತೆಯಿಂದ ಸಿದ್ಧಪಡಿಸಿದ ಪ್ಲ್ರಾನ್ ಅನ್ನೇ ಅನುಷ್ಠಾನಕ್ಕೆ ತಂದು, ಪ್ರಚಾರದ ಕೇಂದ್ರ ವಿಷಯವನ್ನು “ಜಂಗಲ್ ರಾಜ್’ ಆಗಿ ಬದಲಿಸಿಬಿಟ್ಟರು.
ಇದೇ ವೇಳೆಯಲ್ಲೇ ಆರ್‌ಜೆಡಿಯ ಸಾಂಪ್ರದಾಯಿಕ ಮತಗಳಾದ ಮುಸ್ಲಿಂ-ಯಾದವ್(ಎಂವೈ)ಗೆ ವಿರುದ್ಧವಾಗಿ ಮೇಲ್ವರ್ಗಗಳು, ಯಾದವೇತರ ಇತರ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಮಹಾದಲಿತ ವರ್ಗಗಳು ಒಂದಾಗಿಬಿಟ್ಟವು. ಈ ವರ್ಗಗಳೆಲ್ಲ ಈ ಹಿಂದೆ ಆರ್‌ಜೆಡಿಯ ದುರಾಡಳಿತದಿಂದ ಪೀಡಿನೆ ಅನುಭವಿಸಿದ್ದವು.
1990-2005ರ ನಡುವಿನ ಆರ್‌ಜೆಡಿ ಆಡಳಿತದಲ್ಲಿ ಕುಖ್ಯಾತ ಮಾಫಿಯಾ ಡಾನ್‌ಗಳು(ಹೆಚ್ಚಾಗಿ ಯಾದವರು ಮತ್ತು ಮುಸ್ಲಿಮರು) ಬೆಳೆದು ನಿಂತಿದ್ದರು. ಆರ್‌ಜೆಡಿ ಬೆಳೆಸಿತೆನ್ನಲಾದ ಈ ಡಾನ್‌ಗಳು ಮತ್ತು ಕ್ರಿಮಿನಲ್ ಗ್ಯಾಂಗ್‌ಗಳು ಬಿಹಾರಕ್ಕೆ ಆಳವಾದ ಗಾಯವನ್ನು ಮಾಡಿಬಿಟ್ಟವು. ಈ ಕಾರಣಕ್ಕಾಗಿಯೇ, ಆ ದಿನಗಳು ಮತ್ತೆ ಹಿಂದಿರುಗದಿರಲಿ ಎಂದು ಜನರು ಎನ್‌ಡಿಎನತ್ತ ವಾಲತೊಡಗಿದರು. 2ನೇ ಮತ್ತು 3ನೇ ಹಂತದ ಮತದಾನ ಫಲಿತಾಂಶವನ್ನು ಗಮನಿಸಿದಾಗ ಇದು ವೇದ್ಯವಾಗುತ್ತದೆ. ಈ ಹಂತದಲ್ಲಿ ಎನ್‌ಡಿಎ ಮತಗಳಿಕೆ 54.3ರಿಂದ 66.7 ಪ್ರತಿಶತಕ್ಕೆ ನಾಟಕೀಯ ರೀತಿಯಲ್ಲಿ ಜಿಗಿದರೆ, ಮಹಾಘಟಬಂಧನದ ಮತಗಳಿಕೆ ಪ್ರಮಾಣ 44.7 ಪ್ರತಿಶತದಿಂದ 26.9 ಪ್ರತಿಶತಕ್ಕೆ ಕುಸಿಯಿತು.
ಮೋದಿ ಪ್ರಚಾರ ರ್ಯಾಲಿಗಳನ್ನು “ನಡೆಸಿದ’ ಹಾಗೂ “ನಡೆಸದ’ ಜಿಲ್ಲೆಗಳಲ್ಲಿ ಎನ್‌ಡಿಎನ ಮತ ಗಳಿಕೆ ಪ್ರಮಾಣ ಹೇಗಿದೆ ಎನ್ನುವುದನ್ನು ನೋಡಿದರೂ ಇದು ಅರ್ಥವಾಗುತ್ತದೆ. ಮೊದಲ ಹಂತದ ಮತದಾನದ ಸಮಯದಲ್ಲಿ ಮೋದಿ ಪ್ರಜಾರ ನಡೆಸಿದ ಜಿಲ್ಲೆಗಳಲ್ಲಿ ಎನ್‌ಡಿಎನ ಮತಗಳಿಕೆ ಪ್ರಮಾಣ 29.2 ಪ್ರತಿಶತವಿದ್ದರೆ, ಅವರು ಪ್ರಚಾರ ಕೈಗೊಳ್ಳದ ಜಿಲ್ಲೆಗಳಲ್ಲಿ 29.8 ಪ್ರತಿಶತದಷ್ಟಿತ್ತು. 2ನೇ ಹಂತದ ಮತದಾನದಲ್ಲಿ ಈ ಪ್ರಮಾಣ ಕ್ರಮವಾಗಿ 56.3 ಮತ್ತು 52.2 ಪ್ರತಿಶತವಿದೆ. ಮೂರನೇ ಹಂತದ ಮತದಾನದಲ್ಲಿ ಮೋದಿ ಪ್ರಚಾರ ನಡೆಸಿದ ಜಿಲ್ಲೆಗಳಲ್ಲಿ ಎನ್‌ಡಿಎ ಮತಗಳಿಕೆ ಪ್ರಮಾಣ 73.7 ಪ್ರತಿಶತದಷ್ಟಿದ್ದರೆ, ಅವರು ಪ್ರಚಾರ ಮಾಡದ ಜಿಲ್ಲೆಗಳಲ್ಲಿ 62.5 ಪ್ರತಿಶತದಷ್ಟಿತ್ತು.
ಮೊದಲ ಹಂತದ ಮತದಾನಕ್ಕೂ ಮುನ್ನ ಮೋದಿ ಕೇಂದ್ರದಲ್ಲಿ ಎನ್‌ಡಿಎ ಸರಕಾರದ ಸಾಧನೆ ಹಾಗೂ ನಿತೀಶ್ ಕುಮಾರರ ಉತ್ತಮ ಕೆಲಸಗಳ ಪಟ್ಟಿ ಮಾಡುವುದಕ್ಕೆ ಸೀಮಿತವಾಗಿದ್ದರು. ಆದರೆ, ಇದು ಕೆಲಸ ಮಾಡಲಿಲ್ಲ. ಕೂಡಲೇ ತಂತ್ರ ಬದಲಿಸಿದ ಮೋದಿ ಮತ್ತು ಬಿಜೆಪಿಯ ಪ್ರಮುಖ ಪ್ರಚಾರಕರಾದಂಥ ಯೋಗಿ ಆದಿತ್ಯನಾಥ್‌ರಂಥವರು, ಪ್ರಚಾರದ ದಿಕ್ಕನ್ನು “ಆರ್‌ಜೆಡಿಯ ದುರಾಡಳಿತ, ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಇವೆರಡೂ ಪಕ್ಷಗಳ ಕುಟುಂಬ ರಾಜಕಾರಣ’ ದತ್ತ ಹೊರಳಿಸಿದರು.ಈ ಕಾರಣಕ್ಕಾಗಿಯೇ ನಿತೀಶ್ ಕುಮಾರ್ ಅವರು ತಮ್ಮ ಕೊನೆಯ ರಾಜಕೀಯ ಆಸೆ ಈಡೇರಿದ್ದಕ್ಕಾಗಿ ಮೋದಿಯವರಿಗೆ ಧನ್ಯವಾದ ಅರ್ಪಿಸಬೇಕು. ಮೋದಿ ಇಲ್ಲದೇ ಇರುತ್ತಿದ್ದರೆ, ಬಿಹಾರ ಮತ್ತೆ ಜಂಗಲ್ ರಾಜ್‌ಗೆ ಮರಳುವುದನ್ನು ಜನರು ನೋಡಬೇಕಾಗುತ್ತಿತ್ತು. (ಕೃಪೆ: ಸ್ವರಾಜ್ಯ) ಜೈದೀಪ್ ಮಜುಂದಾರ್