Advertisement

ಡಿಸಿಎಂ ಪಟ್ಟ ತ್ಯಜಿಸಿ: ಲಾಲು ಪುತ್ರನಿಗೆ ಪರೋಕ್ಷ ಸೂಚನೆ

02:40 AM Jul 12, 2017 | Team Udayavani |

ಹೊಸದಿಲ್ಲಿ/ಪಟ್ನಾ: ನಿತೀಶ್‌ಕುಮಾರ್‌ ನೇತೃತ್ವದ ಜೆಡಿಯು ಮತ್ತು ಲಾಲು ನೇತೃತ್ವದ ಆರ್‌ಜೆಡಿ ನಡುವಿನ ವೈಮನಸ್ಸು ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಾಲು ಪುತ್ರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಭ್ರಷ್ಟಾಚಾರ ಪ್ರಕರಣ ರೋಚಕ ತಿರುವು ಪಡೆದಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಸೋಮವಾರ ತೇಜಸ್ವಿ ಯಾದವ್‌ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಎಂದು ಘೋಷಿಸಿದ್ದರು. ಈಗ, ಮಂಗಳವಾರ ನಾಯಕರ ಸಭೆ ನಡೆಸಿದ ನಿತೀಶ್‌ಕುಮಾರ್‌, ತತ್ವ, ಸಿದ್ಧಾಂತಗಳ ವಿಚಾರದಲ್ಲಿ ರಾಜಿ ಆಗಲ್ಲ, ಭ್ರಷ್ಟಾಚಾರ ವಿರುದ್ದ ಸಹನೆ ಇಲ್ಲವೇ ಇಲ್ಲ ಎಂದಿದ್ದು, ಇನ್ನು 4 ದಿನಗಳಲ್ಲಿ ರಾಜೀನಾಮೆ ಬಗ್ಗೆ ತೇಜಸ್ವಿ ಯಾದವ್‌ ಅವರೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

Advertisement

ಬುಧವಾರ ಸಂಪುಟ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ತೇಜಸ್ವಿ ಯಾದವ್‌ ಜತೆ ಅಂತಿಮವಾಗಿ ತೀರ್ಮಾನಿಸಲಾಗುತ್ತದೆ ಎಂದು ಜೆಡಿಯು ಮೂಲಗಳು ಹೇಳಿವೆ. ಪಕ್ಷದ ಸಭೆಯ ಬಗ್ಗೆ ವಿವರಣೆ ನೀಡಿದ ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರು ಸಾರ್ವಜನಿಕರನ್ನು ಎದುರಿಸಬೇಕು ಮತ್ತು ನ್ಯಾಯಾಲಯದಿಂದ ಅವರ ವಿರುದ್ಧ ಆರೋಪಗಳು ಸುಳ್ಳು ಎಂದು ಸಾಬೀತಾಗಬೇಕು ಎಂದು ನಿತೀಶ್‌ ಹೇಳಿದ್ದಾರೆ ಎಂದರು. ಬಿಹಾರ ಸರಕಾರ ಅಲ್ಪಮತಕ್ಕೆ ಕುಸಿದರೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಬಿಹಾರ ಬಿಜೆಪಿ ಘಟಕ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next