ಪಾಟ್ನಾ: ಭಾರತೀಯ ಜನತಾ ಪಕ್ಷದ ಮೈತ್ರಿಕೂಟದಿಂದ ಹೊರಬಂದು ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್ ಸೇರಿದಂತೆ ಮಹಾಘಟಬಂಧನ್ ಜೊತೆ ಕೈಜೋಡಿಸುವ ಮೂಲಕ ನಿತೀಶ್ ಕುಮಾರ್ ನೂತನ ಸರ್ಕಾರ ರಚಿಸಿದ್ದು, ಬುಧವಾರ(ಆಗಸ್ಟ್ 24) ಬಿಹಾರ ವಿಧಾನಸಭೆಯಲ್ಲಿ ನಡೆದ ಬಹುಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ:ಮಣಿಪಾಲ: ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ದಾಳಿ; ಬಾಲಕಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು
ಬಿಹಾರ ವಿಧಾನಸಭೆಯ ಕಲಾಪ ದೀರ್ಘ ಸಮಯದವರೆಗೆ ಮುಂದೂಡಿದ್ದು, ನಂತರ ಕಲಾಪ ಆರಂಭವಾದಾಗ ಬಿಜೆಪಿ ಮತದಾನಕ್ಕೂ ಮುನ್ನ ಕಲಾಪದಿಂದ ಹೊರನಡೆದಿತ್ತು.
ವಿಶ್ವಾಸಮತ ಸಾಬೀತುಪಡಿಸುವ ಚರ್ಚೆಯಲ್ಲಿ ಮಾತನಾಡಿದ ಆರ್ ಜೆಡಿ ಮುಖಂಡ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ನೂತನ ಮೈತ್ರಿಕೂಟ ಐತಿಹಾಸಿಕವಾಗಿದೆ ಎಂದು ಹೇಳಿದರು.
ಅಧಿವೇಶನ ಆರಂಭಕ್ಕೂ ಮೊದಲು ವಿಧಾನಸಭಾ ಸ್ಪೀಕರ್ ವಿಜಯ್ ಕುಮಾರ್ ಸಿನ್ನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಜನತಾ ದಳ (ಸಂಯುಕ್ತ)ದ ಉಪ ಸ್ಪೀಕರ್ ಮಹೇಶ್ವರ್ ಹಝಾರಿ ಅವರ ಅಧ್ಯಕ್ಷತೆಯಲ್ಲಿ ಬಹುಮತ ಪರೀಕ್ಷೆ ನಡೆದಿತ್ತು.