Advertisement

Bihar; ಬಹುಮತ ಸಾಬೀತುಪಡಿಸಿದ ನಿತೀಶ್ ಕುಮಾರ್; 129 ಶಾಸಕರ ಬೆಂಬಲ

05:39 PM Feb 12, 2024 | Team Udayavani |

ಪಾಟ್ನಾ: ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರವು ಸೋಮವಾರ ಬಿಹಾರ ವಿಧಾನಸಬೆಯಲ್ಲಿ ಇಂದು ನಿರ್ಣಾಯಕ ವಿಶ್ವಾಸಮತ ಗೆದ್ದುಕೊಂಡಿದೆ. ವಿರೋಧಿ ಪಾಳಯವಾದ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಪಕ್ಷದ ಮೂರು ಶಾಸಕರು ಸೇರಿದಂತೆ ಒಟ್ಟು 129 ಶಾಸಕರು ನಿತೀಶ್ ಸರ್ಕಾರಕ್ಕೆ ಬೆಂಬಲ ನೀಡಿದರು.

Advertisement

ವಿರೋಧ ಪಕ್ಷದ ಸದಸ್ಯರ ವಾಕ್‌ ಔಟ್ ನಡುವೆ ಹೊಸ ಸರ್ಕಾರ 129 ಮತಗಳನ್ನು ಗಳಿಸಿತು. ಕೆಲವೇ ದಿನಗಳ ಹಿಂದೆ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗೆ ಸೇರಿ ಹೊಸ ಸರ್ಕಾರ ರಚಿಸಿದ್ದರು.

ದಿನದ ಆರಂಭದಲ್ಲಿ ನಿತೀಶ್ ಕುಮಾರ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ರಚಿಸಿರುವ ಹೊಸ ಸರ್ಕಾರದಲ್ಲಿ ವಿಶ್ವಾಸ ಕೋರಲು ರಾಜ್ಯ ವಿಧಾನಸಭೆಯ ಮುಂದೆ ಒಂದು ನಿರ್ಣಯವನ್ನು ಮಂಡಿಸಿದರು.

ಇತ್ತೀಚೆಗೆ ಜೆಡಿಯು ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಿತೀಶ್ ಕುಮಾರ್ ಅವರು, ಆರ್‌ ಜೆಡಿಯ ಅವಧ್ ಬಿಹಾರಿ ಚೌಧರಿ ಅವರನ್ನು ವಿಧಾನಸಭೆಯ ಸ್ಪೀಕರ್ ಸ್ಥಾನದಿಂದ ವಜಾಗೊಳಿಸುವ ನಿರ್ಣಯವನ್ನು ಸದನವು ಅಂಗೀಕರಿಸಿದ ಕೂಡಲೇ ಪ್ರಸ್ತಾವನೆಯನ್ನು ಮಂಡಿಸಿದರು.

ಫ್ಲೋರ್ ಟೆಸ್ಟ್ ಗೆದ್ದ ನಂತರ, ನಿತೀಶ್ ಕುಮಾರ್ ಅವರು ತಮ್ಮ ಡಿಸಿಎಂ ಅವರನ್ನು ಟೀಕಿಸಿದರು. ರಾಜ್ಯದಲ್ಲಿ ಪಕ್ಷದ ಆಳ್ವಿಕೆಯಲ್ಲಿ ಆರ್‌ಜೆಡಿ ಭ್ರಷ್ಟ ಆಚರಣೆಗಳಲ್ಲಿ ತೊಡಗಿದೆ ಎಂದು ಆರೋಪಿಸಿದರು. ಹೊಸ ಎನ್‌ಡಿಎ ನೇತೃತ್ವದ ಸರ್ಕಾರ ಅದರ ಬಗ್ಗೆ ತನಿಖೆಯನ್ನು ಪ್ರಾರಂಭಿಸುತ್ತದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇರಲಿಲ್ಲ. ಆರ್ ಜೆಡಿ ತನ್ನ ಆಡಳಿತದಲ್ಲಿ (2005 ಕ್ಕಿಂತ ಮೊದಲು) ಭ್ರಷ್ಟ ಆಚರಣೆಗಳಲ್ಲಿ ತೊಡಗಿತ್ತು. ನಾನು ಇವುಗಳನ್ನು ತನಿಖೆ ಮಾಡುತ್ತೇನೆ,” ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next