Advertisement

Politics: ಮರು ಮೈತ್ರಿಯ ಹಾದಿಯಲ್ಲಿ ನಿತೀಶ್‌ ಕುಮಾರ್‌- ಎನ್‌ಡಿಎ?

09:28 PM Jan 20, 2024 | Pranav MS |

ಪಾಟ್ನಾ: ಜೆಡಿಯು ನಾಯಕ, ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮತ್ತೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವರೇ? ಬಿಹಾರ ರಾಜಕೀಯ ಪಡಸಾಲೆಯಲ್ಲಿ ಇಂಥದ್ದೊಂದು ಗುಸು ಗುಸು ಆರಂಭವಾಗಿದೆ. ಆರ್‌ಜೆಡಿ ನಾಯಕರಾದ ಲಾಲು ಪ್ರಸಾದ್‌ ಯಾದವ್‌, ತೇಜಸ್ವಿ ಯಾದವ್‌ ಜತೆಗೆ ನಿತೀಶ್‌ ಕುಮಾರ್‌ಗೆ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ತೇಜಸ್ವಿ ಮತ್ತು ನಿತೀಶ್‌ ನಡುವೆ ಶುಕ್ರವಾರ ರಾತ್ರಿ ರಹಸ್ಯ ಮಾತುಕತೆಗಳು ನಡೆದಿವೆ. ಮತ್ತೂಂದೆಡೆ, ಬಿಹಾರ ಬಿಜೆಪಿ ಘಟಕದ ಹಿರಿಯ ನಾಯಕ ವಿಜಯ ಕುಮಾರ್‌ ಸಿನ್ಹಾ ನಿವಾಸದಲ್ಲಿಯೂ ಸರಣಿ ಸಭೆಗಳು ನಡೆದಿವೆ. ಇದೇ ವೇಳೆ, ಎನ್‌ಡಿಎಗೆ ನಿತೀಶ್‌ರನ್ನು ಮತ್ತೆ ಸೇರ್ಪಡೆಗೊಳಿಸಲು ವೇದಿಕೆ ಸಿದ್ಧವಾಗಿದೆ ಎನ್ನಲಾಗಿದೆ.

Advertisement

ಪ್ರತಿಪಕ್ಷಗಳ ಒಕ್ಕೂಟ “ಇಂಡಿಯಾ’ದ ಸಂಚಾಲಕ ಹುದ್ದೆಗೆ ಆರ್‌ಜೆಡಿ ತಮ್ಮನ್ನು ಬೆಂಬಲಿಸಲಿಲ್ಲ ಎಂಬ ಸಿಟ್ಟು ನಿತೀಶ್‌ಗಿದೆ. ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆರ್‌ಜೆಡಿ ಹೆಚ್ಚಿನ ಸ್ಥಾನಗಳನ್ನು ಕೇಳುತ್ತಿದೆ ಎಂಬ ವಿಚಾರವೂ ನಿತೀಶ್‌ರನ್ನು ಕಂಗೆಡಿಸಿದೆ. ಕಳೆದ ಚುನಾವಣೆಯಲ್ಲಿ ಆರ್‌ಜೆಡಿ ಒಂದೇ ಒಂದು ಕ್ಷೇತ್ರಗಳಲ್ಲಿ ಗೆಲ್ಲದಿದ್ದರೂ, ಹೆಚ್ಚಿನ ಸೀಟುಗಳನ್ನು ಕೇಳುತ್ತಿರುವುದು ಈ ಮುಸುಕಿನ ಗುದ್ದಾಟಕ್ಕೆ ಕಾರಣ ಎನ್ನಲಾಗಿದೆ.

ಜಾಹೀರಾತಿನಲ್ಲಿ ತೇಜಸ್ವಿ ಮಾಯ:
ಈ ನಡುವೆ, ಬಿಹಾರ ಸರ್ಕಾರದ ಹೊಸ ವಿಡಿಯೋ ಮತ್ತು ಮುದ್ರಿತ ಜಾಹೀರಾತೀನಲ್ಲಿ ಡಿಸಿಎಂ ತೇಜಸ್ವಿ ಯಾದವ್‌ ಫೋಟೋ ಮಾಯವಾಗಿದೆ. ಜೆಡಿಯು ಎಕ್ಸ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಲಾಗಿರುವ 1 ನಿಮಿಷ 29 ಸೆಕೆಂಡ್‌ಗಳ ಆರೋಗ್ಯ ಖಾತೆಯ ವಿಡಿಯೋದಲ್ಲಿ ತೇಜಸ್ವಿ ಹೆಸರೇ ಇಲ್ಲ. ಮುದ್ರಿತ ಜಾಹೀರಾತಿನಲ್ಲೂ ಅವರ ವಿವರಗಳಿಲ್ಲ. ಹೀಗಾಗಿ, ಕಾಂಗ್ರೆಸ್‌-ಆರ್‌ಜೆಡಿ-ಜೆಡಿಯು ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ.

ಬಿಹಾರದ ಇಂಡಿಯಾ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದಾದರೆ ಎನ್‌ಡಿಎಗೆ ಅದರಿಂದ ಶೇ.100 ಒಳ್ಳೆಯದಾಗಲಿದೆ. ನಿಶ್ಚಿತವಾಗಿಯೂ ಮಹಾಮೈತ್ರಿಕೂಟ ರಾಜ್ಯದಲ್ಲಿ ಮುರಿದು ಹೋಗಲಿದೆ.
ಪಶುಪತಿ ಕುಮಾರ್‌ ಪರಸ್‌, ಕೇಂದ್ರ ಸಚಿವ

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next