Advertisement

ನಿತೀಶ್ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಬಹುದು: ತೇಜಸ್ವಿ ಯಾದವ್

06:53 PM Aug 21, 2022 | Team Udayavani |

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಬಹುದು ಎಂಬ ಊಹಾಪೋಹದ ನಡುವೆಯೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಪ್ರತಿಪಕ್ಷಗಳು ಪರಿಗಣಿಸಿದರೆ, ಜೆಡಿಯು ನಾಯಕ “ಪ್ರಬಲ ಅಭ್ಯರ್ಥಿಯಾಗಬಹುದು” ಎಂದು ಭಾನುವಾರ ಹೇಳಿದ್ದಾರೆ.

Advertisement

ಪಿಟಿಐಗೆ ನೀಡಿದ ಸಂದರ್ಶನದಲ್ಲಿ,2024 ರ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಲು ಕುಮಾರ್ ಸೂಕ್ತರೇ ಮತ್ತು ಅವರು ವಿರೋಧ ಪಕ್ಷದ ಅಭ್ಯರ್ಥಿಯಾಗಬಹುದೇ ಎಂಬ ಪ್ರಶ್ನೆಗೆ ಯಾದವ್, “ನಾನು ಈ ಪ್ರಶ್ನೆಯನ್ನು ಗೌರವಾನ್ವಿತ ನಿತೀಶ್ ಜಿ ಅವರಿಗೆ ಬಿಡುತ್ತೇನೆ. ಆದರೆ ನಾನು ಇಡೀ ವಿರೋಧ ಪಕ್ಷದ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ಪರಿಗಣಿಸಿದರೆ, ಗೌರವಾನ್ವಿತ ನಿತೀಶ್ ಜಿ ಖಂಡಿತವಾಗಿಯೂ ಪ್ರಬಲ ಅಭ್ಯರ್ಥಿಯಾಗಬಹುದು” ಎಂದರು.

ಬಿಹಾರದ ಉಪಮುಖ್ಯಮಂತ್ರಿ ಯಾದವ್ ಅವರು, ಮಹಾಘಟಬಂಧನ್ ಸರ್ಕಾರವು ಮರಳುವುದರೊಂದಿಗೆ “ಜಂಗಲ್ ರಾಜ್” ಮರಳಿ ಬರುತ್ತದೆ ಎಂಬ ಬಿಜೆಪಿಯ ನಿರೂಪಣೆಯ ವಿರುದ್ಧ ಆಕ್ರೋಶ ಹೊರ ಹಾಕಿ, “ದೇಶದ ಮುಂದಿರುವ ದೊಡ್ಡ ಸವಾಲನ್ನು, ಬಿಜೆಪಿಯ ಪ್ರಾಬಲ್ಯವನ್ನು ಬಹುತೇಕ ವಿರೋಧ ಪಕ್ಷಗಳು ಗುರುತಿಸುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next