Advertisement

ಇದೇ ಕೊನೆಯ ಚುನಾವಣೆ ಎಂದು ಹೇಳಿಯೇ ಇಲ್ಲ: ನಿತೀಶ್ ಕುಮಾರ್

12:57 PM Nov 13, 2020 | keerthan |

ಪಾಟ್ನಾ: ಚುನಾವಣೆ ರ್ಯಾಲಿಯಲ್ಲಿ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿಯೇ ಇಲ್ಲ ಎಂದು ನಿತೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನಾನು ಕೊನೆಯ ಚುನಾವಣೆ ಎಂದು ಹೇಳಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

ನಾನು ರಾಜಕೀಯ ನಿವೃತ್ತಿಯ ಬಗ್ಗೆ ಹೇಳಿಯೇ ಇಲ್ಲ. ಪ್ರತಿ ಬಾರಿಯ ಕೊನೆಯ ಚುನಾಚಣಾ ರ್ಯಾಲಿಯಲ್ಲಿ ಹೇಳುವಂತೆ ಅಂತ್ಯ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಎಂದಿದ್ದೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಿಯೋಜಿತ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಈ ಹೇಳಿಕೆಗೂ ಮುನ್ನ ನಾನು ನೀಡಿದ್ದ ಕೆಲವು ಹೇಳಿಕೆಗಳನ್ನು ಸಂಪೂರ್ಣವಾಗಿ ಕೇಳಿದರೆ ಪೂರ್ಣ ಚಿತ್ರಣ ನಿಮಗೆ ಅರ್ಥವಾಗುತ್ತದೆ. ನೀವು ಹಾಗೆ ಮಾಡಿದಿದ್ದರೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಿಶ್ಚಯವಾಗದ ಸಿಎಂ ಬಿಎಸ್‌ವೈ ದೆಹಲಿ ಪ್ರವಾಸ: ದೀಪಾವಳಿ ನಂತರ ‘ಲಾಬಿ’ ಡೆಲ್ಲಿಗೆ ಶಿಫ್ಟ್?

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಜಯ ಸಾಧಿಸಿದೆ. ಬಿಜೆಪಿ 74 ಸ್ಥಾನ ಗೆದ್ದರೆ ನಿತೀಶ್ ಕುಮಾರ್ ಅವರ ಜೆಡಿಯು 43 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ. ಆದರೆ ಚುನಾವಣಾ ಪೂರ್ವ ಒಪ್ಪಂದಂತೆ ನಿತೀಶ್ ಕುಮಾರ್ ಅವರೇ ಬಿಹಾರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next