Advertisement

Protest ನಡುವೆ ಮಹಿಳೆಯರ ಕುರಿತಾದ ಕಾಮೆಂಟ್‌ಗೆ ಕ್ಷಮೆಯಾಚಿಸಿದ ನಿತೀಶ್

09:00 PM Nov 08, 2023 | Team Udayavani |

ಪಾಟ್ನಾ/ನವದೆಹಲಿ: ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಮಹಿಳಾ ಶಿಕ್ಷಣದ ಮಹತ್ವದ ಕುರಿತು ಒಂದು ದಿನದ ಹಿಂದೆ ಮಾಡಿದ ಟೀಕೆಗಳಿಗಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಮಂಡಲದ ಉಭಯ ಸದನಗಳಲ್ಲಿ ಮತ್ತು ಹೊರಗೆ ಬುಧವಾರ ಕ್ಷಮೆಯಾಚಿಸಿದ್ದಾರೆ.

Advertisement

“ನಿನ್ನೆ ನಾನು ಹೇಳಿದ ಮಾತು ಬಹಳಷ್ಟು ಜನರಿಗೆ ಇಷ್ಟವಾಗಿಲ್ಲ ಎಂದು ನನಗೆ ಇಂದು ತಿಳಿದಿದೆ. ಮಹಿಳಾ ಸಬಲೀಕರಣ ಮತ್ತು ಜನಸಂಖ್ಯೆ ನಿಯಂತ್ರಣದಲ್ಲಿ ಮಹಿಳೆಯರಲ್ಲಿ ಸುಧಾರಿತ ಸಾಕ್ಷರತೆಯ ಪಾತ್ರದ ಮೇಲೆ ನನ್ನ ಸರಕಾರದ ಒತ್ತಡವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯುಂಟಾಗಿದ್ದರೆ, ನಾನು ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಹಿಂಪಡೆಯುತ್ತೇನೆ, ”ಎಂದು ಕುಮಾರ್ ಹೇಳಿದರು.

ವಿಧಾನಸೌಧದ ಆವರಣಕ್ಕೆ ಪ್ರತಿಪಕ್ಷ ಬಿಜೆಪಿ ಸೇರಿ ಇತರ ಪಕ್ಷದ ನಾಯಕರು ಹೇಳಿಕೆಗಳನ್ನು ಖಂಡಿಸುವ ಮತ್ತು ರಾಜೀನಾಮೆಗೆ ಒತ್ತಾಯಿಸುವ ಫಲಕಗಳನ್ನು ಹಿಡಿದುಕೊಂಡು ಆಗಮಿಸಿದ್ದರು.

ಆರ್‌ಜೆಡಿಯ ಎಂಎಲ್‌ಸಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ಪಿಟಿಐಗೆ ಪ್ರತಿಕ್ರಿಯಿಸಿ ”ನಿತೀಶ್ ಕುಮಾರ್ ಅವರು ತಾನು ಹೇಳಿದ್ದು ಸರಿಯಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅವರು ಕ್ಷಮೆಯಾಚಿಸಿದ ಕಾರಣ ನಾವು ಹಿಂದಿನ ಮಾತುಗಳನ್ನು ಬಿಡಬೇಕು” ಎಂದರು.

ಹೇಳಿದ್ದೇನು?

Advertisement

ಮಂಗಳವಾರ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ”ವಿದ್ಯಾವಂತ ಮಹಿಳೆ ಲೈಂಗಿಕ ಸಂಭೋಗದ ಸಮಯದಲ್ಲಿ ತನ್ನ ಪತಿಯನ್ನು ಹೇಗೆ ತಡೆಯಬಹುದು ಎಂಬ ಸ್ಪಷ್ಟವಾದ ವಿವರಣೆಯನ್ನು  ಮಂಡಿಸಿ, ಗಂಡನ ಕೆಲಸಗಳು ಹೆಚ್ಚಿನ ಜನ್ಮಗಳಿಗೆ ಕಾರಣವಾಯಿತು. ಹೇಗಾದರೂ, ಶಿಕ್ಷಣದೊಂದಿಗೆ, ಮಹಿಳೆಗೆ ಅವನನ್ನು ಹೇಗೆ ತಡೆಯುವುದು ಎಂದು ತಿಳಿದಿದೆ.ಈ ಕಾರಣದಿಂದಾಗಿ ಜನನಗಳ ಸಂಖ್ಯೆಗಳು ಕಡಿಮೆಯಾಗುತ್ತಿವೆ”ಎಂದು ಅವರು ಹಳ್ಳಿಗಾಡಿನ ಶೈಲಿಯಲ್ಲಿ ಹೇಳಿದ್ದರು.ಶಿಕ್ಷಣದೊಂದಿಗೆ ಫಲವತ್ತತೆ ದರವು ಮೊದಲು 4.3 ರಷ್ಟಿತ್ತು, ಈಗ 2.9 ಕ್ಕೆ ಇಳಿದಿದೆ” ಎಂದು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದರು.

ಬಿಜೆಪಿ ವ್ಯಾಪಕ ಆಕ್ರೋಶ ಹೊರ ಹಾಕಿ ರಾಜೀನಾಮೆಗೆ ಒತ್ತಾಯಿಸಿ, ನಿತೀಶ್ ಮಾನಸಿಕ ಅಸ್ವಸ್ಥ ವ್ಯಕ್ತಿ, ಸಿಎಂ ಹುದ್ದೆಯಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next