Advertisement

60 ಕಿಮೀ ಅಂತರಕ್ಕೆ ಒಂದೇ ಟೋಲ್‌ : ರಾಜ್ಯಸಭೆಯಲ್ಲಿ ಗಡ್ಕರಿ ಘೋಷಣೆ

02:08 AM Mar 23, 2022 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೇವಲ 60 ಕಿ.ಮೀ. ಅಂತರದಲ್ಲಿ ಇರುವ ಎರಡು ಟೋಲ್‌ಗ‌ಳ ಪೈಕಿ ಒಂದನ್ನು ಶಾಶ್ವತ ವಾಗಿ ಮುಚ್ಚಲಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಮಾತ ನಾಡಿದ ಅವರು, ಮುಂದಿನ ಮೂರು ತಿಂಗಳ ಒಳಗಾಗಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಟೋಲ್‌ ಪ್ಲಾಜಾಗಳ ಬಳಿ ವಾಸಿಸುವ ಸ್ಥಳೀಯರಿಗೆ ಆಧಾರ್‌ ಕಾರ್ಡ್‌ ಆಧಾರಿತ ಪಾಸ್‌ ನೀಡಲಾಗುತ್ತದೆ ಎಂದೂ ಗಡ್ಕರಿ ಭರವಸೆ ನೀಡಿದ್ದಾರೆ.

ಅಮೆರಿಕದ ರಸ್ತೆಗಳಂತೆ: 2024ರ ಡಿಸೆಂಬರ್‌ ಒಳಗಾಗಿ ದೇಶದ ಹೆದ್ದಾರಿಗಳು ಅಮೆರಿಕದಲ್ಲಿ ಇರುವ ಅತ್ಯುತ್ತಮ ಹೆದ್ದಾರಿಗಳಂತೆ ಪರಿರ್ತನೆಗೊಳ್ಳಲಿವೆ. ಆ ದೇಶ ಶ್ರೀಮಂತವಾಗಿರುವುದರಿಂದಲೇ ಅಲ್ಲಿನ ರಸ್ತೆಗಳೂ ಗುಣ ಮಟ್ಟದಿಂದ ಕೂಡಿದೆ. ದೇಶ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ 2024ರ ಡಿಸೆಂಬರ್‌ ಒಳಾಗಿ ಇಲ್ಲಿನ ರಸ್ತೆಗಳೂ ಆ ದೇಶಗಳಲ್ಲಿ ಹೊಂದಿ ರುವ ಗುಣಮಟ್ಟಗಳನ್ನು ಹೊಂದಲಿವೆ ಎಂದು ಹೇಳಿದ್ದಾರೆ ಸಚಿವ ಗಡ್ಕರಿ.

ಬೆಂಗಳೂರು ಮತ್ತು ಚೆನ್ನೈ ನಡುವೆ ಎರಡು ಗಂಟೆಗಳಲ್ಲಿ ಸಂಚರಿಸುವಂಥ ರಸ್ತೆ ನಿರ್ಮಾಣದ ಬಗ್ಗೆ ಚಿಂತನೆಗಳು ನಡೆದಿವೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ:ಬಂಡೀಪುರ : ಗ್ರಾಮದ ಅನೇಕ ಜಾನುವಾರುಗಳನ್ನು ಭಕ್ಷಿಸಿದ್ದ ಚಿರತೆ ಕೊನೆಗೂ ಸೆರೆ

Advertisement

2 ವರ್ಷಗಳಲ್ಲಿ: ಬೆಳವಣಿಗೆಯಾಗುತ್ತಿರುವ ತಾಂತ್ರಿಕ ಅಂಶಗಳಿಂದಾಗಿ ವಿದ್ಯುತ್‌ ಚಾಲಿತ ವಾಹನಗಳ ವೆಚ್ಚ ಕಡಿಮೆಯಾಗುತ್ತಿದೆ. ಮುಂದಿನ 2 ವರ್ಷಗಳಲ್ಲಿ ಪೆಟ್ರೋಲ್‌ ಚಾಲಿತ ವಾಹನಗಳಿಗೆ ಸಮನಾಗಿ ಅವುಗಳು ವೃದ್ಧಿ ಕಾಣಲಿವೆ ಎಂದು ಹೇಳಿದ್ದಾರೆ. ಲೀಥಿಯಂ ಬ್ಯಾಟರಿಗಳ ದರವೂ ಕಡಿಮೆ ಯಾಗಲಿದೆ ಎಂದು ಗಡ್ಕರಿ ಅವರು ಪ್ರತಿಪಾದಿಸಿದ್ದಾರೆ.

ಭಾರೀ ಇಳಿಕೆ: ಪಾಕಿಸ್ಥಾನದಿಂದ ಉಗ್ರರ ಒಳನುಸುಳುವಿಕೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ಥಾನದ ವಿವಿಧ ಭಾಗಗಳಲ್ಲಿ ಉಗ್ರರಿಗೆ ತರಬೇತಿ ನೀಡುವ ಶಿಬಿರಗಳ ಸಂಖ್ಯೆಯಲ್ಲಿ ಏರಿಕೆ ಯಾಗಿದೆ ಎಂದು ಸರಕಾರ ತಿಳಿಸಿದೆ.ಕಡ್ಡಾಯ: ಜನಗಣತಿ ಸಂದರ್ಭ ದೇಶಾ ದ್ಯಂತ ಸಮೀಕ್ಷೆ ನಡೆಯುವ ವೇಳೆ ಅಧಿಕಾರಿಗಳು ಮತ್ತು ಸಿಬಂದಿ ಕೇಳುವ ಪ್ರಶ್ನೆಗಳಿಗೆ ದೇಶವಾಸಿಗಳು ಕಡ್ಡಾಯವಾಗಿ ಉತ್ತರ ಕೊಡಬೇಕಾಗುತ್ತದೆ ಎಂದಿದ್ದಾರೆ.

ಮಾನಸ ಸರೋವರಕ್ಕೆ ಶೀಘ್ರ ಹೊಸ ದಾರಿ
2023ರ ಡಿಸೆಂಬರ್‌ ಒಳಗಾಗಿ ಮಾನಸ ಸರೋವರ ಯಾತ್ರೆ ಕೈಗೊ ಳ್ಳಲು ಚೀನ ಅಥವಾ ನೇಪಾಳ ಮೂಲಕ ತೆರಳ ಬೇಕಾಗಿಲ್ಲ. ಉತ್ತರಾಖಂಡದ ಪಿತ್ರೋಗಡದ ಮೂಲಕ ತೆರಳುವ ಬಗ್ಗೆ ಹೊಸ ಮಾರ್ಗ ಸಿದ್ಧಪಡಿಸಲಾಗುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. ಇದ ರಿಂದಾಗಿ ಸುಲಭವಾಗಿ ಪ್ರಯಾಣ ಸಾಧ್ಯ ಞವಾಗಲಿದೆ ಜತೆಗೆ ಈಗಿನ ದಾರಿಯಂತೆ ನಡೆದುಕೊಂಡು ಹೋಗಬೇಕಾಗುವ ಅಗತ್ಯ ಬರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next