Advertisement
ಶ್ರೀನಗರ ಕಣಿವೆಯಿಂದ ಲೇಹ್‌ಗೆ ವರ್ಷವಿಡೀ ಅಡೆ ತಡೆಯಲ್ಲದೆ ಸಂಪರ್ಕ ಸಾಧಿಸಲು ಈ ಯೋಜನೆ ನೆರವಾಗಲಿದೆ. ಇದರಿಂದ 3.5 ಗಂಟೆ ಬೇಕಾಗುತ್ತಿದ್ದ ಅವಧಿ 15 ನಿಮಿಷಗಳಿಗೆ ಇಳಿಯಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾಮಗಾರಿ ಉದ್ಘಾಟಿಸಿದ್ದಾರೆ. ಇದೇ ಮಾರ್ಗದಲ್ಲಿ ಝೆಡ್ ಮಾರ್ ಟನೆಲ್ ಕೂಡ 2,379 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, 2021 ಜೂನ್‌ಗೆ ಕ್ತಾಯಗೊಳ್ಳಲಿದೆ.
*ಟನೆಲ್ ಸೋನ್‌ಮಾರ್ಗ್‌ನಿಂದ ಶುರುವಾಗಿ ಕಾರ್ಗಿಲ್‌ನ ದ್ರಾಸ್ ಪಟ್ಟಣದಲ್ಲಿ ಮುಕ್ತಾಯ.
Related Articles
*ಶ್ರೀನಗರದಿಂದ ಲೇಹ್ ಮೂಲಕ ದ್ರಾಸ್, ಕಾರ್ಗಿಲ್‌ಗಳಿಗೆ ನಿರಂತರ ಸಂಪರ್ಕ.
*ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಬೆಸೆಯಲಿದೆ.
*ಹಿಮಪಾತದಿಂದ ರಸ್ತೆ ಬಂದ್ ಆಗುವುದನ್ನು ತಪ್ಪಿಸಲಿದೆ.
*ಲಡಾಖ್, ಗಿಲ್ಗಿಟ್, ಬಾಲಿಸ್ಥಾನ್‌ಗಳಲ್ಲಿನ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸೇನಾ ಪಡೆಗಳ ಸಂಚಾರಕ್ಕೂ ಅನುಕೂಲ.
*ಸ್ಥಳೀಯರಿಗೆ ಹೆಚ್ಚಿನ ರೀತಿಯಲ್ಲಿ ಉದ್ಯೋಗಾವಕಾಶ
Advertisement
ಭದ್ರತಾ ವ್ಯವಸ್ಥೆಗಳು ಹೇಗೆ ಇರಲಿವೆ?*ಪ್ರತೀ 750 ಮೀಟರ್‌ಗೆ ಒಂದರಂತೆ ತುರ್ತು ರಸ್ತೆ.
*ಪಾದಚಾರಿ ಮಾರ್ಗ ಮತ್ತು ತುರ್ತು ದೂರವಾಣಿ ವ್ಯವಸ್ಥೆ.
*ವಿಶೇಷ ರೀತಿಯ ಸಂಚಾರ ನಿಯಂತ್ರಣ ಲೈಟಿಂಗ್ ವ್ಯವಸ್ಥೆ.
*ಅಲ್ಲಲ್ಲಿ ಸಿಸಿಟಿವಿ ಕೆಮರಾಗಳ ಅಳವಡಿಕೆ.
* ಬೆಂಕಿ ಮುನ್ನೆಚ್ಚರಿಕೆ ನೀಡುವ ಅಲರಾಂ.