ನಾಗಪುರ, ಸೆ. 11: ರಸ್ತೆಗಳನ್ನು ನಿರ್ಮಿಸುವಾಗ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಆಸಾಲ್ಟ್(ಡಾಂಬರು) ರಸ್ತೆಗಳನ್ನು ನಿರ್ಮಾಣ ಮಾಡುವಾಗ 10 ವರ್ಷಗಳ ನಿರ್ವಹಣೆ ಮತ್ತು ದುರಸ್ತಿಯ ಖಾತರಿ ನೀಡಿದರೆ ಮಾತ್ರ ಗುತ್ತಿಗೆದಾರನಿಗೆ ಕೆಲಸ ನೀಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೂಚನೆ ನೀಡಿದ್ದಾರೆ.
ಎಫ್‌ಐಸಿಸಿಐ ವತಿಯಿಂದ ಆಯೋಜಿತ ಬಿಟ್ ಕಾಯಿನ್ ಕಾರ್ಯಕ್ರಮದ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವಿವಿಧ ಗುತ್ತಿಗೆದಾರರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ರಸ್ತೆ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಷಯದಲ್ಲಿ ನಾವು ಹೆಚ್ಚಿನ ಪ್ರಮಾಣದ ಯಶಸ್ಸು ಕಂಡುಕೊಂಡಿದ್ದೇವೆ. ಆದರೆ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುವಾಗ ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದರು.
ಆಸಾಲ್ಟ್ ರಸ್ತೆ ನಿರ್ಮಾಣದ ಗುತ್ತಿಗೆದಾರರು ಸಹ ನಿರ್ಮಾಣದ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಅಗತ್ಯವಿದ್ದರೆ ವಿಶ್ವದ ಯಾವುದೇ ತಂತ್ರಜ್ಞಾನವನ್ನು ಬಳಸಬಹುದು. ಆದರೆ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡಬೇಕೇಂದು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ನಿರ್ಮಾಣಕ್ಕಾಗಿ ಈವರೆಗೆ 8 ದಶಲಕ್ಷ ಮೆಟ್ರಿಕ್ ಟನ್ ಫ್ಲೆ ಆಶ್ ಅನ್ನು ಬಳಸಿಕೊಂಡಿದೆ. ಪ್ರಸ್ತುತ ಉಷ್ಣ ವಿದ್ಯುತ್ ಸ್ಥಾವರ ಕೇಂದ್ರದ 50-60 ಕಿ.ಮೀ ಪ್ರದೇಶದಲ್ಲಿ ಫ್ಲೆ ಆಶ್ ಅನ್ನು ಬಳಸಲಾಗುತ್ತಿದೆ. ಫ್ಲೆ ಆಶ್ ಇನ್ನು ಮುಂದೆ ಲಭ್ಯವಿಲ್ಲ ಎಂದು ಅವರು ಗಮನಸೆಳೆದರು.
ಆಸಾಲ್ಟ್ ರಸ್ತೆಗಳು 5 ವರ್ಷಗಳ ಕಾಲವೂ ಸರಿಯಾಗಿ ಬಾಳ್ವಿಕೆ ಬರುವುದಿಲ್ಲ. ಹೆಚ್ಚಿನ ಮಳೆಯಿರುವ ಪ್ರದೇಶಗಳಲ್ಲಿಯ ರಸ್ತೆಗಳು ಬೇಗನೆ ಹಳಾಗುತ್ತದೆ. ಆದ್ದರಿಂದ ಆಸಾಲ್ಟ್ ರಸ್ತೆಗಳ ನಿರ್ವಹಣೆ ಮತ್ತು ದುರಸ್ತಿಗಾಗಿ 10 ವರ್ಷಗಳ ಖಾತರಿ ನೀಡುವ ಕಂಪೆನಿಗೆ ಗುತ್ತಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಆಧುನಿಕ ತಂತ್ರಜ್ಞಾನವನ್ನು ಬಳಸುವ ಆಸಾಲ್ಟ್ ರಸ್ತೆಗಳು 10 ವರ್ಷಗಳವರೆಗೆ ಹದಗೆಡುವುದಿಲ್ಲ ಎಂಬ ಅಂಶದ ಬಗ್ಗೆ ಕಂಪೆನಿಗಳು ಈಗ ಯೋಚಿಸಬೇಕು. ಅಲ್ಲದೆ ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಮಣ್ಣು ಮತ್ತು ಕೆಸರು ಈ ಪ್ರದೇಶದ ಸರೋವರ, ಕೊಳ, ನದಿಗಳನ್ನು ಆಳಗೊಳಿಸುವ ಮೂಲಕ ಪಡೆಯಬಹುದು. ಇದರಿಂದಾಗಿ ರಸ್ತೆ ನಿರ್ಮಾಣದ ಜತೆಗೆ ನೀರಿನ ಸಂರಕ್ಷಣೆ ಕೂಡ ನಡೆಯುತ್ತದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ.