ಹೊಸದಿಲ್ಲಿ : ಖ್ಯಾತ ಭಾರತೀಯ ಅಮೆರಿಕನ್ ಅರ್ಥ ಶಾಸ್ತ್ರಜ್ಞ, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯ ಅವರು ಇಂದು ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪನಗರಿಯ ಅವರ ಕಾರ್ಯಾವಧಿ ಇದೇ ಆಗಸ್ಟ್ 31ರಂದು ಮುಗಿಯುವುದಿತ್ತು. ಅದಕ್ಕೆ ಮುನ್ನವೇ ಅವರು ರಾಜೀನಾಮೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಪನಗರಿಯ ಅವರು ತಾನು ನ್ಯೂಯಾರ್ಕ್‌ನ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ಅಧ್ಯಾಪನಕ್ಕಾಗಿ ಮರಳುವುದಕ್ಕಾಗಿ ಹೇಳಿದ್ದಾರೆ.
ಪನಗರಿಯ ಅವರು ಈ ಹಿಂದೆ ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು.
ಇದಕ್ಕೂ ಮೊದಲು ಅವರು ಕಾಲೇಜ್ ಪಾರ್ಕ್‌ನಲ್ಲಿನ ಯುನಿವರ್ಸಿಟಿ ಆಪ್ ಮೇರಿಲ್ಯಾಂಡ್‌ನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರು. ಅವರು ವಿಶ್ವ ಬ್ಯಾಂಕ್, ಐಎಂಎಫ್, ಡಬ್ಲ್ಯುಟಿಓ ಹಾಗೂ ವಿಶ್ವಸಂಸ್ಥೆಯ ವಾಣಿಜ್ಯ ಅಭಿವೃದ್ಧಿ ಮಂಡಳಿಯಲ್ಲೂ ದುಡಿದಿದ್ದಾರೆ. ಅವರು ಪ್ರಿನ್ಸ್‌ಟನ್ ಯುನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪಡೆದಿದ್ದಾರೆ.