Advertisement

ಈಕ್ವೆಡಾರ್‌ನಲ್ಲಿ ನಿತ್ಯಾನಂದನ ಪ್ರತ್ಯೇಕ ರಾಷ್ಟ್ರ ಸೃಷ್ಟಿ!

09:39 AM Dec 04, 2019 | sudhir |

ಬೆಂಗಳೂರು: ಭಾರತದಿಂದ ಓಡಿಹೋಗಿರುವ ವಿವಾದಿತ ಸ್ವಾಮೀಜಿ ನಿತ್ಯಾನಂದ, ಈಕ್ವೆಡಾರ್‌ನಲ್ಲಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾನೆ. ತನ್ನ ದೇಶಕ್ಕೆ “ಕೈಲಾಸ’ ಎಂದು ಹೆಸರಿಟ್ಟುಕೊಂಡಿರುವ ಆತ, ಆ ಸ್ವಯಂಘೋಷಿತ ರಾಷ್ಟ್ರದ ಕುರಿತಂತೆ ವೆಬ್‌ಸೈಟೊಂದನ್ನು ಆರಂಭಿಸಿ, ಅದರಲ್ಲಿ ತನ್ನ ದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Advertisement

ವೆಬ್‌ಸೈಟ್‌ನಲ್ಲಿ, “ಇದೊಂದು ಗಡಿ ರಹಿತ ದೇಶವಾಗಿದೆ. ತಮ್ಮ ದೇಶಗಳಿಂದ ಪರಿತ್ಯಕ್ತರಾದ ವಿಶ್ವದ ಎಲ್ಲಾ ಹಿಂದೂಗಳಿಗೆ ಹಾಗೂ ಹಿಂದುತ್ವವನ್ನು ಪಾಲಿಸಲು ತೊಡಕಾಗಿರುವ ದೇಶಗಳಲ್ಲಿರುವ ಹಿಂದೂಗಳಿಗಾಗಿ ಈ ರಾಷ್ಟ್ರವನ್ನು ಸೃಷ್ಟಿಸಲಾಗಿದೆ. ಈ ರಾಷ್ಟ್ರದ ನಾಗರಿಕರಾಗಲು ಬಯಸುವವರಿಗೆ ಮುಕ್ತ ಸ್ವಾಗತವಿದೆ’ ಎಂದು ಘೋಷಿಸಲಾಗಿದೆ.

ಎಲ್ಲಿದೆ ಈ ದೇಶ?
ವರ್ಷಗಳ ಹಿಂದೆ ಈಕ್ವೆಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿದ್ದ ನಿತ್ಯಾನಂದ, ಈಗ ಅದೇ ದ್ವೀಪವನ್ನು ತನ್ನ ಹೊಸ ರಾಷ್ಟ್ರವೆಂದು ಘೋಷಿಸಿಕೊಂಡಿದ್ದಾನೆ. ಅಲ್ಲದೆ, ಈ ರಾಷ್ಟ್ರಕ್ಕೆ ತನ್ನದೇ ಆದ ಪ್ರತ್ಯೇಕ ಪಾಸ್‌ಪೋರ್ಟ್‌ ವ್ಯವಸ್ಥೆಯಿದೆ ಹೇಳಿದ್ದಾನೆ ನಿತ್ಯಾನಂದ.

ವಿಶೇಷತೆಯೇನು?
ಆತನೇ ಹೇಳಿಕೊಳ್ಳುವ ಪ್ರಕಾರ, ಆ ದೇಶಕ್ಕೆ ಹಲವಾರು ವಿಶೇಷತೆಗಳಿವೆ. ಅಲ್ಲಿ ದೇಗುಲ-ಆಧಾರಿತ ಜೀವನ ವ್ಯವಸ್ಥೆಯಿರಲಿದ್ದು, ಅಲ್ಲಿನ ನಾಗರಿಕರಿಗೆ ಶಿವನ ಮೂರನೇ ಕಣ್ಣಿನ ಹಿಂದಿರುವ ವಿಜ್ಞಾನ, ಯೋಗ, ಧ್ಯಾನಗಳನ್ನು ಹೇಳಿಕೊಡಲಾಗುತ್ತದೆ. ಇನ್ನು, ಮಕ್ಕಳಿಗೆ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಇರಲಿದೆ. ಇದಲ್ಲದೆ, ಅಲ್ಲಿನ ನಾಗರಿಕರಿಗೆ ಉಚಿತ ಆರೋಗ್ಯ ಸೇವೆಗಳು, ಉಚಿತ ಶಿಕ್ಷಣ, ಉಚಿತ ಆಹಾರದ ಸೌಲಭ್ಯಗಳೂ ಇರಲಿವೆ.

– ಪರಿತ್ಯಕ್ತ ಹಿಂದೂಗಳಿಗಳಿಗಾಗಿ ಕೈಲಾಸ ರಾಷ್ಟ್ರ ರಚನೆ: ನಿತ್ಯಾನಂದ ಘೋಷಣೆ
– ಹೊಸ ರಾಷ್ಟ್ರದಲ್ಲಿ ದೇಗುಲ-ಆಧಾರಿತ ಜೀವನ ವ್ಯವಸ್ಥೆಗೆ ಒತ್ತು
– ನವರಾಷ್ಟ್ರದ ನಾಗರಿಕರಾಗಲು ಎಲ್ಲರಿಗೂ ಸ್ವಾಗತ ಕೋರಿದ ಸ್ವಾಮಿ
– ಹೊಸ ರಾಷ್ಟ್ರಕ್ಕೆ ತನ್ನದೇ ಆದ ಪ್ರತ್ಯೇಕ ಪಾಸ್‌ಪೋರ್ಟ್‌ ವ್ಯವಸ್ಥೆ
– ಉಚಿತ ಆರೋಗ್ಯ ಸೇವೆ, ಉಚಿತ ಶಿಕ್ಷಣ, ಉಚಿತ ಆಹಾರ ಸೌಲಭ್ಯ
– ವಿದ್ಯಾರ್ಥಿಗಳಿಗೆ ಗುರುಕುಲ ಮಾದರಿಯ ವಿದ್ಯಾಭ್ಯಾಸ

Advertisement
Advertisement

Udayavani is now on Telegram. Click here to join our channel and stay updated with the latest news.

Next