ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥರು ಇಬ್ಬರೂ ನಿತ್ಯ ಯೋಗಾಸನ ಪಟುಗಳೇ. ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಚಿಕ್ಕ ಪ್ರಾಯದಿಂದಲೂ ಪ್ರಾಣಾಯಾಮವನ್ನು ಸಂಪ್ರ ದಾಯದಂತೆ ನಡೆಸುತ್ತಿದ್ದಾರಾದರೂ ಯೋಗಾಸನಗಳ ಅಭ್ಯಾಸವನ್ನು ಮಾಡುತ್ತಿದ್ದುದು 1984ರ ಬಳಿಕ. ತಮ್ಮ ಮೂರನೆಯ ಪರ್ಯಾಯ ವೇಳೆ ಯೋಗಾ ಸನಗಳನ್ನು ಮಾಡಲು ಆರಂಭಿಸಿದರು.
ಆಗ ಶ್ರೀಗಳಿಗೆ ಯೋಗಾಸನಗಳನ್ನು ಕಲಿಸಿಕೊಟ್ಟವರು ಯೋಗ ಗುರು ಡಾ| ಕೃಷ್ಣ ಭಟ್. ನರೇಂದ್ರ ಮೋದಿಯವರಿಗೆ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಲು ಸಲಹೆ ನೀಡಿದ ಬೆಂಗಳೂರು ಜಿಗಣಿ ವಿವೇಕಾನಂದ ಯೋಗ ಕೇಂದ್ರದ ಡಾ| ಎಚ್.ಆರ್. ನಾಗೇಂದ್ರರೂ ಮಾರ್ಗದರ್ಶನ ಮಾಡಿದ್ದರು. ಶ್ರೀಗಳು ಸುಮಾರು ಎರಡು ವರ್ಷಗಳ ಹಿಂದಿನವರೆಗೂ ದಿನಕ್ಕೆ 15-20 ನಿಮಿಷಗಳನ್ನು ಯೋಗಾಸನ, ಪ್ರಾಣಾಯಾಮಕ್ಕೆ ಮೀಸಲಿಡು ತ್ತಿದ್ದರು.
ಯೋಗಾಸನಗಳನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕೆಂಬ ನಿಯಮದಿಂದಲೋ ಏನೋ ಸದಾ ಗಡಿಬಿಡಿಯಲ್ಲಿರುವ ಶ್ರೀಗಳು ಮಧ್ಯಾಹ್ನದೊಳಗೆ (ಹೇಗಿದ್ದರೂ ಮಧ್ಯಾಹ್ನದವರೆಗೆ ಖಾಲಿ ಹೊಟ್ಟೆ) ಸಮಯ ಸಿಕ್ಕಿದಾಗ ಗಡಿಬಿಡಿಯಲ್ಲಿಯೇ ಭುಜಂಗಾಸನ, ಸರ್ವಾಂಗಾಸನ, ಹಲಾಸನ ಮೊದಲಾದ ಯೋಗಾಸನಗಳನ್ನು, ಅನುಲೋಮ ವಿಲೋಮ ಮೊದಲಾದ ಪ್ರಾಣಾಯಾಮ ಮಾಡುತ್ತಿದ್ದರು. ಬೆನ್ನು ಹುರಿ ನೋವು, ಹರ್ನಿಯಾ ಶಸ್ತ್ರಚಿಕಿತ್ಸೆ ಬಳಿಕ ಯೋಗಾಸನಗಳನ್ನು ಮಾಡ ಲಾಗುತ್ತಿರಲಿಲ್ಲ. ಆದರೆ ಕೈಕಾಲು ಅಲ್ಲಾಡಿಸುವ ಸರಳ ವ್ಯಾಯಾಮ ಬಿಟ್ಟಿರಲಿಲ್ಲ.
ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು 6 ಗಂಟೆ ಯೊಳಗೆ ಪೂಜೆಗಳನ್ನು ಮುಗಿಸುವ ಶ್ರೀಗಳು ಸ್ಥಳದ ಅನುಕೂಲತೆಗಳನ್ನು ನೋಡಿ ಆಸನಗಳನ್ನು ಮಾಡುತ್ತಿದ್ದರು. ಸಂಚಾರದಲ್ಲಿರುವಾಗ ಕೆಲವು ಬಾರಿ ಆಸನಗಳ ಅಭ್ಯಾಸ ಮಾಡಲಿಕ್ಕೆ ಆಗುತ್ತಿರಲಿಲ್ಲ. ಇಂತಹ ಆಸನಗಳ ಅಭ್ಯಾಸದಿಂದಲೋ ಏನೋ ಅವರು ನೂರಾರು ಕಿ.ಮೀ. ಸುಲಭವಾಗಿ ನಡೆಯು ತ್ತಿದ್ದರು. ನೀರಿನಲ್ಲಿಯೂ ಅವರು ಯೋಗಾಸನಗಳನ್ನು ನಡೆಸುತ್ತಿದ್ದರು. ನೀರಿನಲ್ಲಿ ಅಂಗಾತ ಮಲಗಿ ಚಲಿಸುವುದು, ಕುತ್ತಿಗೆವರೆಗೆ ನೀರಿನಲ್ಲಿ ನಿಂತು ನಿಧಾನವಾಗಿ ನಡೆಯುವುದು,
ಎತ್ತರದಿಂದ ನೀರಿಗೆ ಧುಮುಕುವುದು (ಡೈವಿಂಗ್) ಹೀಗೆ ಸುಮಾರು ಹತ್ತು ಬಗೆಯ ವಿವಿಧ ಸ್ಟ್ರೋಕ್‌ಗಳನ್ನು ಲೀಲಾಜಾಲವಾಗಿ ಮಾಡು ತ್ತಿದ್ದರು. ಕಷ್ಟಕರವಾದ ನೀರಿನಲ್ಲಿ ಮಾಡುವ ಚಮ ತ್ಕಾರಗಳನ್ನು ಮಾಡಲು ಅವರು ಕಲಿತದ್ದು ಉಡುಪಿಯ ಮಧ್ವ ಸರೋವರದಲ್ಲಿ. ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಿಕ್ಕಪ್ರಾಯದಿಂದಲೇ ಯೋಗಾಸನಗಳನ್ನು ಶಿಸ್ತು ಬದ್ಧವಾಗಿ ಕಲಿತು, ಅದರಲ್ಲಿ ಪ್ರಾವೀಣ್ಯ ಪಡೆದಿ ದ್ದಾರೆ. ಅವರು ಯೋಗನಿದ್ರಾಸನ, ಮಯೂರಾಸನ ದಂತಹ ಅತಿ ಕ್ಲಿಷ್ಟ ಆಸನಗಳೂ ಸೇರಿದಂತೆ ಸುಮಾರು 50 ಆಸನಗಳನ್ನು ಸಿದ್ಧಿಸಿಕೊಂಡಿದ್ದಾರೆ.