Advertisement
ಹೀಗೆಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ನೇರ ವಾಗ್ಧಾಳಿ ನಡೆಸಿರುವುದು ಬಿಹಾರ ಸಿಎಂ ನಿತೀಶ್ ಕುಮಾರ್. ಚುನಾವಣೆಗೆ ಇನ್ನೇನು 4 ದಿನಗಳು ಇರುವಂತೆಯೇ ಟೇಘ್ರಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾ, ರಾಜಕೀಯ ಪ್ರತಿಸ್ಪರ್ಧಿ ವಿರುದ್ಧ ಕಟು ಮಾತು ಗಳಿಂದಲೇ ದಾಳಿ ನಡೆಸಿ ರುವ ನಿತೀಶ್, “ರಾಜ್ಯದ ಅಧಿಕಾರದ ಗದ್ದುಗೆಯಲ್ಲಿ ಇತರರೂ ಇದ್ದರು. ಆದರೆ ಅವರೇನು ಮಾಡಿದರು? ಶಾಲೆ-ಕಾಲೇಜು ಕಟ್ಟಿದರಾ? ಆಡಳಿತ ನಡೆಸಿದರು, ಅಕ್ರಮ ಆಸ್ತಿ ಮಾಡಿಕೊಂಡರು, ಜೈಲಿಗೆ ಹೋದರು ಅಷ್ಟೆ’ ಎಂದರು.
Related Articles
ಮುಂದಿನ ವಾರವೇ ಬಿಹಾರ ಚುನಾವಣೆಯ ಮೊದಲ ಹಂತ ಆರಂಭವಾಗಲಿದ್ದು, ಎಬಿಪಿ -ಸಿವೋಟರ್ ನಡೆಸಿರುವ ಚುನಾವಣಾಪೂರ್ವ ಸಮೀಕ್ಷೆಯೂ ಎನ್‌ಡಿಎಗೆ ಜಯ ಖಚಿತ ಎಂದು ಹೇಳಿದೆ.
Advertisement
ಫಡ್ನವೀಸ್‌ಗೆ ಸೋಂಕುಬಿಹಾರ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಅವರಿಗೆ ಶನಿ ವಾರ ಕೊರೊನಾ ಸೋಂಕು ದೃಢಪಟ್ಟಿದೆ. ವಿಶೇಷವೆಂದರೆ, ಬಿಹಾರದಲ್ಲಿ ಬಿಜೆಪಿಯ ಒಟ್ಟು 7 ನಾಯ ಕರಿಗೆ ಪಾಸಿಟಿವ್ ಆದಂತಾಗಿದೆ. ಈಗಾಗಲೇ ಪಕ್ಷದ ನಾಯ ಕರಾದ ಸುಶೀಲ್ ಮೋದಿ, ಶಹನವಾಜ್ ಹುಸೇನ್, ರಾಜೀವ್ ಪ್ರತಾಪ್ ರೂಡಿ, ಮಂಗಲ್ ಪಾಂಡೆ, ಜೆಡಿಯು ನ ವಿಜಯ್ ಕುಮಾರ್ ಮಾಂಝಿಗೆ ಸೋಂಕು ದೃಢಪಟ್ಟಿದೆ.