Advertisement

ನಿತೀಶ್‌ ಅವರೇ ಸಿಎಂ; ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಬನ್ಸಾಲ್‌ ಸ್ಪಷ್ಟನೆ

12:16 AM Nov 12, 2020 | mahesh |

ಪಟ್ನಾ /ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟದೊಳಗೆ ಬಿಜೆಪಿಯೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಈಗಾಗಲೇ ಮಾತು ಕೊಟ್ಟಿರುವಂತೆ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್‌ ಬನ್ಸಾಲ್‌ ಸ್ಪಷ್ಟವಾಗಿ ಹೇಳಿದ್ದಾರೆ.

Advertisement

ಮಂಗಳವಾರವಷ್ಟೇ ಬಿಹಾರ ವಿಧಾನಸಭೆ ಚುನಾವಣೆಯ ಫ‌ಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 74, ಜೆಡಿಯು 43, ವಿಕಾಸ್‌ಶೀಲ ಇನ್ಸಾನ್‌ ಪಾರ್ಟಿ 4 ಮತ್ತು ಹಿಂದೂಸ್ಥಾನಿ ಅವಾಮ್‌ ಮೋರ್ಚಾ 4 ಸ್ಥಾನಗಳಲ್ಲಿ ಜಯ ಗಳಿಸಿವೆ. ಲೆಕ್ಕಾಚಾರದಲ್ಲಿ ಬಿಜೆಪಿಯೇ ದೊಡ್ಡ ಪಕ್ಷ. ಆದರೆ ಚುನಾವಣೆಗೂ ಮುನ್ನ ನಿತೀಶ್‌ ಕುಮಾರ್‌ ಅವರೇ ಸಿಎಂ ಅಭ್ಯರ್ಥಿ ಎಂದು ಹೇಳಿರುವುದರಿಂದ ಅವರೇ 4ನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಹೇಳಿದೆ.

ಬಿಜೆಪಿಯ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಏರ್ಪಡಿಸಲಾಗಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಿತೀಶ್‌ ಅವರ ಅಭಿವೃದ್ಧಿ ಕೇಂದ್ರಿತ ಆಡಳಿತದಿಂದಾಗಿ ಬಿಹಾರದಲ್ಲಿ ಗೆದ್ದಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ನಿತೀಶ್‌ ಅವರದೇ ನೇತೃತ್ವ ಎಂದು ಪರೋಕ್ಷವಾಗಿ ಹೇಳಿದರು.

ನಾವು ಸಮಾನರು
ನಾವು ಮತ್ತು ಅಂಗಪಕ್ಷಗಳು ಸಮಾನರಾಗಿದ್ದೇವೆ. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ’ ಎಂದೂ ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್‌ ಬನ್ಸಾಲ್‌ ಹೇಳಿದರು.

“ಮೌನ ಮತದಾರ’ರಿಗೆ ಧನ್ಯವಾದ
ದಿಲ್ಲಿಯಲ್ಲಿ ಮಾತನಾಡಿದ ಮೋದಿ, ಬಿಹಾರದಲ್ಲಿ ಎನ್‌ಡಿಎ ಗೆಲುವಿಗೆ ಕಾರಣರಾದ “ಮೌನ ಮತದಾರ’ರಿಗೆ ಧನ್ಯವಾದ ಹೇಳಿದ್ದಾರೆ. “ಎನ್‌ಡಿಎಗೆ ಸೈಲೆಂಟ್‌ ವೋಟರ್ಸ್‌ ಬೆಂಬಲ ನೀಡಿದ್ದರಿಂದಲೇ ಗೆಲುವು ಸಾಧ್ಯವಾಯಿತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಸೈಲೆಂಟ್‌ ವೋಟರ್ಸ್‌ ಎಂದರೆ ಮಹಿಳಾ ಮತದಾರರು. ನಾವು ಮಾಡಿದ ಉತ್ತಮ ಕೆಲಸವನ್ನು ಅವರು ಬೆಂಬಲಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

Advertisement

ಕೊರೊನಾ ನಿರ್ವಹಣೆಗೆ ಸಿಕ್ಕ ಜಯ
ಉತ್ತಮವಾಗಿ ಕೊರೊನಾ ನಿರ್ವಹಣೆ ಮಾಡಿದ್ದರಿಂದಲೇ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಯಶಸ್ಸು ಸಿಕ್ಕಿದೆ ಎಂದೂ ಪ್ರಧಾನಿ ಮೋದಿ ಹೇಳಿದರು. ಕೊರೊನಾವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಪ್ರತಿಯೊಬ್ಬರದ್ದೂ ಯಶಸ್ಸಿನ ಕಥೆಯೇ ಆಗಿದೆ ಎಂದರು.

ನಿನ್ನೆ ಏನಾಯಿತು?
1ಮಂಗಳವಾರ ಮಧ್ಯರಾತ್ರಿ ವೇಳೆಗೆ ಸಂಪೂರ್ಣ ಫ‌ಲಿತಾಂಶ ಪ್ರಕಟ
2ನಿತೀಶ್‌ರನ್ನು ಬೆಂಬಲಿಸುವುದಿಲ್ಲ ಎಂದ ಚಿರಾಗ್‌ ಪಾಸ್ವಾನ್‌
3ಜನರೇ ಸುಪ್ರೀಂ, ಎನ್‌ಡಿಎ ಬೆಂಬಲಿಸಿದ ಜನರಿಗೆ ಧನ್ಯವಾದಗಳು ಮತ್ತು ಪ್ರಧಾನಿ ಮೋದಿ ಅವರಿಗೂ ಧನ್ಯವಾದಗಳು ಎಂದ ನಿತೀಶ್‌ಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next