Advertisement

ಪದಕ ವಿಜೇತರಿಗೆ “ಇಂಡಿಯಾ ಹೌಸ್‌”ನಲ್ಲಿ ಗೌರವಿಸಿದ ನೀತಾ ಅಂಬಾನಿ

10:38 PM Aug 10, 2024 | Team Udayavani |

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ, ಕಂಚು ಗೆದ್ದ ಅಮಾನ್‌ ಸೆಹ್ರಾವತ್‌ ಹಾಗೂ ಹಾಕಿ ತಂಡದ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಸದಸ್ಯೆ ನೀತಾ ಅಂಬಾನಿ ಶನಿವಾರ ಇಂಡಿಯಾ ಹೌಸ್‌ನಲ್ಲಿ ಸನ್ಮಾನಿಸಿದ್ದಾರೆ.

Advertisement

ಕ್ರೀಡಾಗ್ರಾಮದಲ್ಲಿರುವ ಇಂಡಿಯಾ ಹೌಸ್‌ನಲ್ಲಿ ನಡೆದ ಈ ಸಂಭ್ರಮಾಚರಣೆ ವೇಳೆ ಭಾರತೀಯ ಒಲಿಂಪಿಕ್‌ ಸಂಘದ ಅಧ್ಯಕ್ಷೆ ಪಿ.ಟಿ.ಉಷಾ ಸಹ ಉಪಸ್ಥಿತರಿದ್ದರು. ಪಿ.ಆರ್‌.ಶ್ರೀಜೇಶ್‌, ಅಭಿಶೇಕ್‌ ನೈನ್‌, ಅಮಿತ್‌ ರೋಹಿದಾಸ್‌ ಹಾಗೂ ಸಂಜಯ್‌ ಹಾಕಿ ತಂಡದ ಪರವಾಗಿ ಭಾಗಿಯಾಗಿದ್ದರು. ಮತ್ತುಳಿದ ಆಟಗಾರರು ಭಾರತಕ್ಕೆ ಬಂದ ಕ್ರೀಡಾಪಟುಗಳ ಮೊದಲ ಬ್ಯಾಚ್‌ನಲ್ಲಿದ್ದರು.

ಅಮಾನ್‌ ಸೆಹ್ರಾವತ್‌ರನ್ನು ಶ್ಲಾ ಸಿದ ನೀತಾ, ‘ಚೊಚ್ಚಲ ಪಂದ್ಯದಲ್ಲೇ ಅಮಾನ್‌ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಅಡೆತಡೆಗಳ ನಡುವೆಯೇ ಭಾರತದ ಅತ್ಯಂತ ಕಿರಿಯ ಒಲಿಂಪಿಕ್‌ ಪದಕ ವಿಜೇತರಾಗಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next