Advertisement

Nissan Motor India ವತಿಯಿಂದ ದೇಶಾದ್ಯಂತ ಉಚಿತ ಎಸಿ ತಪಾಸಣೆ ಶಿಬಿರ

07:57 AM Apr 16, 2023 | Team Udayavani |

ನವದೆಹಲಿ: ಗ್ರಾಹಕ ಕೇಂದ್ರಿತ, ಉತ್ಕೃಷ್ಟ ಸೇವೆಯ ಮೇಲೆ ನಿರಂತರ ಗಮನ ಹೊಂದಿರುವ ನಿಸ್ಸಾನ್ ಮೋಟಾರ್ ಇಂಡಿಯಾ ತನ್ನೆಲ್ಲ ಗ್ರಾಹಕರ ಕಾರುಗಳಿಗೆ ಉಚಿತ ಎಸಿ ತಪಾಸಣೆ ಶಿಬಿರಗಳನ್ನು ಘೋಷಿಸಿದೆ.

Advertisement

ಭಾರತದಾದ್ಯಂತ ಹರಡಿರುವ ನಿಸ್ಸಾನ್ ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಏಪ್ರಿಲ್ 15ರಿಂದ ಜೂನ್ 15, 2023ರ ವರೆಗೆ ಕಾರುಗಳ ಎಸಿ ತಪಾಸಣೆ ಶಿಬಿರಗಳನ್ನು ನಿಸ್ಸಾನ್ ನಡೆಸಲಿದೆ. ನಿಸ್ಸಾನ್ ಮತ್ತು ಡಟ್ಸನ್ ವಾಹನ ಮಾಲೀಕರು ನಿಸ್ಸಾನ್ ಕನೆಕ್ಟ್ ಅಪ್ಲಿಕೇಶನ್ ಅಥವಾ ನಿಸ್ಸಾನ್ ಮೋಟಾರ್ ಇಂಡಿಯಾ ವೆಬ್‌ಸೈಟ್ (www.nissan.in) ಮೂಲಕ ತಪಾಸಣೆಗಾಗಿ ಸೇವಾ ಸಮಯವನ್ನು ಸುಲಭವಾಗಿ ಬುಕ್ ಮಾಡಬಹುದು. ಇದು ವಾಹನ ಮಾಲೀಕರಿಗೆ ಜಂಜಾಟವಿಲ್ಲದ ಸವಾರಿ ಅನುಭವದ ಭರವಸೆಯನ್ನು ನೀಡುತ್ತದೆ ಮತ್ತು ನಿಸ್ಸಾನ್ ಬ್ರ್ಯಾಂಡ್‌ನಲ್ಲಿ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರಸ್ತುತ ನಿಸ್ಸಾನ್ ಮತ್ತು ದಟ್ಸನ್ ಬ್ರಾಂಡ್ ವಾಹನಗಳಿಗೆ ಸೇವೆ ನೀಡುತ್ತಿರುವ 122-ವರ್ಕ್‌ಶಾಪ್ ಜಾಲದಲ್ಲಿ ಈ ಸೇವಾ ಶಿಬಿರಗಳನ್ನು ನಡೆಸಲಾಗುವುದು.

ನಿಸ್ಸಾನ್-ತರಬೇತಿ ಪಡೆದ ವೃತ್ತಿಪರ ಮೆಕ್ಯಾನಿಕ್‌ಗಳು ಎಸಿ-ತಪಾಸಣೆ ಶಿಬಿರಗಳನ್ನು ನಡೆಸಿ, ಸೇವೆಯ ಗುಣಮಟ್ಟವನ್ನು ಖಚಿತಪಡಿಸಲು ನಿಸ್ಸಾನ್ ನೈಜ ಬಿಡಿಭಾಗಗಳನ್ನೇ ಬಳಸುತ್ತಾರೆ. ಶಿಬಿರವು ಸಮಗ್ರ 20-ಅಂಶಗಳ ತಪಾಸಣೆಯನ್ನು ಒಳಗೊಂಡಿದೆ. ಇದರಲ್ಲಿ ಉಚಿತ ಎಸಿ ತಪಾಸಣೆ, ವಾಹನದ ಆಂತರಿಕ, ಬಾಹ್ಯ ಮತ್ತು ತಳಭಾಗದ ತಪಾಸಣೆ ಹಾಗೂ ರೋಡ್ ಟೆಸ್ಟ್ ಕೂಡ ಸೇರಿವೆ. ಇದಲ್ಲದೆ, ಗ್ರಾಹಕರ ವಾಹನಗಳಿಗೆ ಟಾಪ್ ವಾಶ್ ಕಾಂಪ್ಲಿಮೆಂಟರಿ ಕೊಡುಗೆಯನ್ನೂ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ಲೇಬರ್ ವೆಚ್ಚಗಳ ಮೇಲೆ 20% ಮತ್ತು ಮೌಲ್ಯವರ್ಧಿತ ಸೇವೆಗಳ (VAS) ಮೇಲೆ 10% ವರೆಗೆ ರಿಯಾಯಿತಿ ಪ್ರಯೋಜನ ಪಡೆಯಬಹುದು.

ನಿಸ್ಸಾನ್ ಮೋಟಾರ್ ಇಂಡಿಯಾ ಸರಿಸಾಟಿಯಿಲ್ಲದ ಮೌಲ್ಯವನ್ನು ನೀಡಬಲ್ಲ ಪ್ರಿ-ಪೇಯ್ಡ್ ಮೆಂಟೆನೆನ್ಸ್ ಪ್ಯಾಕೇಜ್ (PMP) ಅನ್ನು ಸೇವಾ ಶಿಬಿರಗಳಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತಿದೆ. ಇದು ಗ್ರಾಹಕರಿಗೆ ನಿರ್ವಹಣಾ ವೆಚ್ಚದಲ್ಲಿ 20% ವರೆಗೆ ಉಳಿತಾಯ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next