Advertisement

Nissan ಮ್ಯಾಗ್ನೈಟ್‌ ಗೆಜಾ

12:21 AM May 28, 2023 | Team Udayavani |

ಹೊಸದಿಲ್ಲಿ: ನಿಸಾನ್‌ ಮೋಟಾರ್‌ ಇಂಡಿಯಾ ಕಂಪೆನಿಯು ತನ್ನ ಎಸ್‌ಯುವಿ ನಿಸಾನ್‌ ಮ್ಯಾಗ್ನೆ„ಟ್‌ ಗೆಜಾ ವಿಶೇಷ ಆವೃತ್ತಿಯ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಅದರ ಆರಂಭಿಕ ಬೆಲೆ 7,39,000 (ಎಕ್ಸ್‌ ಶೋರೂಂ ದಿಲ್ಲಿ) ರೂ. ಇದೆ. ಈ ಕಾರು ಸುಧಾರಿತ ಇನ್ಫೋ ಎಂಟರ್‌ಟೇನ್ಮೆಂಟ್‌ ಸಿಸ್ಟಮ್‌ ಮತ್ತು ಸುರಕ್ಷತ ಸೌಲಭ್ಯಗಳನ್ನು ಒಳಗೊಂಡಿವೆ. ಜತೆಗೆ 9 ಇಂಚಿನ ಟಚ್‌ ಸ್ಕ್ರೀನ್‌ ಡಿಸ್ಪೆ, ವೈರ್‌ಲೆಸ್‌ ಕನೆಕ್ಟಿವಿಟಿಯೊಂದಿಗೆ ಆ್ಯಂಡ್ರಾಯ್ಡ ಕಾರ್‌ ಪ್ಲೇ, ಜೆಬಿಎಲ್‌ ಸ್ಪೀಕರ್‌ಗಳು, ರೇರ್‌ ಕೆಮರಾ ಹೊಂದಿದೆ. ಮೊನೊಟೋನ್‌ ಬಣ್ಣಗಳ ಶ್ರೇಣಿಯಲ್ಲಿ ಕಾರು ಲಭ್ಯವಿದೆ. ಈಗಾಗಲೇ ಬುಕ್ಕಿಂಗ್‌ ಆರಂಭಗೊಂಡಿದ್ದು, ಗ್ರಾಹಕರು 11,000 ರೂ.ಗಳನ್ನು ಪಾವತಿಸಿ ಮುಂಗಡ ಬುಕಿಂಗ್‌ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next