Advertisement
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೋರ್ಸ್ ಮುಗಿಸಿದ ಕೂಡಲೇ ನಿಶ್ವಿಕಾ ಮುಖಮಾಡಿ ದ್ದು ಮುಂಬೈನತ್ತ. ಅದು ನಟನಾ ತರಬೇತಿಗೆ. ಮುಂಬೈನಲ್ಲಿ ಒಂದು ವರ್ಷ ಆ್ಯಕ್ಟಿಂಗ್ ಕೋರ್ಸ್ ಕೂಡಾ ಮಾಡಿದ್ದಾರಂತೆ ನಿಶ್ವಿಕಾ. ಚಿತ್ರರಂಗಕ್ಕೇ ಬರಬೇಕೆಂಬ ಆಸೆಯಿಂದ ಇದ್ದ ನಿಶ್ವಿಕಾಗೆ ಈಗ ಕೈ ತುಂಬಾ ಸಿನೆಮಾ ಸಿಕ್ಕಿರೋದು ಖುಷಿ ತಂದಿದೆ. ಎಲ್ಲಾ ಓಕೆ, ಒಂದು ಸಿನೆಮಾನೂ ಬಿಡುಗಡೆ ಯಾಗುವ ಮುನ್ನ ಸಿನೆಮಾ ಮೇಲೆ ಸಿನೆಮಾ ಒಪ್ಪಿಕೊಳ್ಳಲು ಕಾರಣವೇನು ಎಂದು ನೀವು ಕೇಳಬಹುದು. “”ನಾನು ಒಪ್ಪಿಕೊಂಡಿರುವ ಮೂರು ಚಿತ್ರಗಳಲ್ಲೂ ನನ್ನ ಪಾತ್ರ ವಿಭಿನ್ನವಾಗಿದೆ. ವಾಸು ಸಿನೆಮಾದಲ್ಲಿ ನಾನು ಮೆಡಿಕಲ್ ಸ್ಟೂಡೆಂಟ್. ಬೋಲ್ಡ್ ಅಂಡ್ ಬಬ್ಲಿ ಪಾತ್ರ. ಇನ್ನು ಅಮ್ಮಾ ಐ ಲವ್ ಯೂ ಸಿನೆಮಾದಲ್ಲಿ ತುಂಬಾ ಸೆಟಲ್ಡ್ ಆಗಿರುವ ಪಾತ್ರ. ಯಾರ ಕೈಕೆಳಗೂ ಕೆಲಸ ಮಾಡದೇ ಸ್ವಂತ ಉದ್ಯೋಗ ಮಾಡಬೇಕೆಂದು ಕನಸು ಕಾಣುವ ಪಾತ್ರ. ಪಡ್ಡೆಹುಲಿ ಚಿತ್ರದಲ್ಲಿ ಕಾಲೇಜು ಹುಡುಗಿ. ಹೀಗೆ ನನಗೆ ಮೂರು ಸಿನೆಮಾಗಳಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ. ಈಗಾಗಲೇ ಎರಡು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ” ಎನ್ನುತ್ತಾರೆ ನಿಶ್ವಿಕಾ. ಸಿನೆಮಾ ತೆರೆಕಂಡ ನಂತರ ಪ್ರೇಕ್ಷಕರು ತನ್ನ ಯಾವ ಪಾತ್ರವನ್ನು ಹೆಚ್ಚು ಇಷ್ಟಪಡುತ್ತಾ ರೆಂದು ನೋಡಿಕೊಂಡು ಮುಂದೆ ಪಾತ್ರಗಳನ್ನು ಆಯ್ಕೆ ಮಾಡುತ್ತಾ ರಂತೆ. ಅಂದ ಹಾಗೆ, ಮೂರು ಸಿನೆಮಾಗಳಲ್ಲೂ ನಿಶ್ವಿಕಾ ಆಡಿಷನ್ ಕೊಟ್ಟು ಆಯ್ಕೆಯಾಗಿದ್ದಂತೆ. ನಿಶ್ವಿಕಾಗೆ ನಟಿ ರಮ್ಯಾ ಎಂದರೆ ತುಂಬಾ ಇಷ್ಟವಂತೆ. “”ನಾನು ಏಕಾಏಕಿ ಮೂರು ಸಿನೆಮಾ ಒಪ್ಪಿಕೊಂಡಿರೋದರಿಂದ ಎಲ್ಲರಿಗೂ ಯಾರು ಈ ಹುಡುಗಿ ಎಂಬ ಕುತೂಹಲವಿದೆ. ನಾನು ಕೂಡಾ ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು” ಎನ್ನುತ್ತಾರೆ ನಿಶ್ವಿಕಾ. Advertisement
ನಿಶ್ವಿಕಾ ಬಿಝಿ ಹುಡುಗಿ
07:30 AM Mar 18, 2018 | |
Advertisement
Udayavani is now on Telegram. Click here to join our channel and stay updated with the latest news.