ನವದೆಹಲಿ: ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯೀ ಸಮಿತಿ ಮುಖ್ಯಸ್ಥ ಶಶಿ ತರೂರ್ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಬಿಜೆಪಿ ವಕ್ತಾರ ನಿಶಿಕಾಂತ್ ದುಬೆ, ಸ್ಥಾಯೀ ಸಮಿತಿ ಮುಖ್ಯಸ್ಥ ಸ್ಥಾನದಿಂದ ತರೂರ್‌ರನ್ನು ಪದಚ್ಯುತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ತರೂರ್ ಸಂಸದೀಯ ಸ್ಥಾಯೀ ಸಮಿತಿಯನ್ನು ಕಾಂಗ್ರೆಸ್‌ನ ವಿಸ್ತೃತಭಾಗದಂತೆ ನೋಡುತ್ತಿದ್ದಾರೆ, ತಮ್ಮ ಸ್ಥಾನವನ್ನು ಕೇಂದ್ರಸರ್ಕಾರಕ್ಕೆ ಮಸಿ ಬಳಿಯಲು ಬಳಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಷಯವೇನು?: ಇತ್ತೀಚೆಗೆ ಬಿಜೆಪಿ ಸಂಸದ ಸಂಬಿತ್ ಪಾತ್ರಾ ಟ್ವೀಟ್ ಮಾಡಿ, ಕೇಂದ್ರಸರ್ಕಾರ ಕೊರೊನಾವನ್ನು ನಿಯಂತ್ರಿಸುವ ರೀತಿಯ ಬಗ್ಗೆ ಅಪಪ್ರಚಾರ ಮಾಡಲು ಕಾಂಗ್ರೆಸ್ ಒಂದು ಟೂಲ್‌ಕಿಟ್ ಸಿದ್ಧಪಡಿಸುತ್ತಿದೆ ಎಂದು ಆರೋಪಿಸಿದ್ದರು. ಮಾತ್ರವಲ್ಲ ಅದರ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಅದನ್ನು ಟ್ವಿಟರ್ ತನ್ನ ನಿಯಮಗಳ ಪ್ರಕಾರ “ದುರ್ಬಳಕೆಗೊಂಡ ವಿಷಯ’ (ಮ್ಯಾನಿಪ್ಯುಲೇಟೆಡ್ ಮೀಡಿಯಾ) ಎಂದು ಟ್ಯಾಗ್ ಮಾಡಿತ್ತು. ಇದರ ಬಗ್ಗೆ ಟ್ವಿಟರ್‌ಗೆ ವಿವರಣೆ ಕೇಳಿದ್ದ ಕೇಂದ್ರ, ಮ್ಯಾನಿಪ್ಯುಲೇಟೆಡ್ ಪದ ತೆಗೆಯುವಂತೆ ಆದೇಶಿಸಿತ್ತು. ಈ ಬಗ್ಗೆ ವಿವರಣೆ ನೀಡಿ ಎಂದು ಶಶಿ ತರೂರ್; ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಆ ಕಾರಣವನ್ನಿಟ್ಟುಕೊಂಡೇ ಬಿಜೆಪಿ ನಾಯಕರು ಶಶಿ ತರೂರ್ ವಿರುದ್ಧ ಮುಗಿಬಿದ್ದಿರುವುದು.
ಇದನ್ನೂ ಓದಿ :ಜಯನಗರದ ಮಳೆಮಲ್ಲೇಶ್ವರ ಗುಡ್ಡದಲ್ಲಿ ಕರಡಿ ಪ್ರತ್ಯಕ್ಷ : ಭಯಭೀತರಾದ ಜನತೆ