Advertisement

ವಿಂಡೀಸ್‌ ಕ್ರಿಕೆಟಿಗ ಸ್ಯಾಮಿಗೆ ಪಾಕ್‌ ಗೌರವ ಪೌರತ್ವ “”ನಿಶಾನ್‌ ಎ ಪಾಕಿಸ್ತಾನ್‌'”ಖಾತ್ರಿ

04:53 PM Feb 23, 2020 | keerthan |

ಕರಾಚಿ: ವೆಸ್ಟ್‌ ಇಂಡೀಸ್‌ ಕ್ರಿಕೆಟಿನ ಆಲ್‌ರೌಂಡರ್‌ ಡ್ಯಾರೆನ್‌ ಸ್ಯಾಮಿ, ಪಾಕಿಸ್ತಾನದ ಗೌರವ ಪೌರತ್ವ “ನಿಶಾನ್‌ ಎ ಪಾಕಿಸ್ತಾನ್‌’ಗೆ ಪಾತ್ರರಾಗಲಿದ್ದಾರೆ.

Advertisement

ಮಾ.23ರಂದು ಪಾಕ್‌ ಅಧ್ಯಕ್ಷ ಅರೀಫ್ ಅಲ್ವಿ ಇದನ್ನು ಪ್ರದಾನ ಮಾಡಲಿದ್ದಾರೆ ಎಂದು ಪಿಸಿಬಿ ಶನಿವಾರ ಪ್ರಕಟಿಸಿದೆ.

ಭಯೋತ್ಪಾದಕ ಭೀತಿಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲು ವಿಶ್ವದ ಬಹುತೇಕ ರಾಷ್ಟ್ರದ ಆಟಗಾರರು ಹಿಂದೇಟು ಹಾಕಿದರೂ ಸ್ಯಾಮಿ ಮಾತ್ರ ಇದಕ್ಕೆ ಯಾವುದೇ ತಕರಾರು ತೆಗೆಯದೆ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಸಹಕಾರ ನೀಡಿದ್ದರು. ಈ ಕಾರಣಕ್ಕಾಗಿ ಗೌರವ ಪೌರತ್ವ ನೀಡಲಾಗುತ್ತಿದೆ ಎಂದು ಪಿಸಿಬಿ ಮೀಡಿಯಾ ಟ್ವೀಟ್‌ ಮಾಡಿದೆ.

ನಮ್ಮ ತಂಡ ಪೇಶಾವರ ಝಲ್ಮಿ ನಾಯಕ ಡ್ಯಾರೆನ್‌ ಸ್ಯಾಮಿಗೆ ಗೌರವ ಪೌರತ್ವ ನೀಡಬೇಕೆಂದು ಪಾಕ್‌ಅಧ್ಯಕ್ಷರಿಗೆ ಮನವಿ ಮಾಡಿದ್ದೆವು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮುಖ್ಯಸ್ಥ ಎಹ್ಸಾನ್‌ ಮಣಿ ಕೂಡ ಆಸಕ್ತಿ ವಹಿಸಿದ್ದರು. ನಮ್ಮ ಮನವಿಯನ್ನು ಪಿಸಿಬಿ ಪುರಸ್ಕರಿಸಿದೆ ಎಂದು ಪಾಕಿಸ್ತಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಟಿ20 ಕೂಟದ ಪ್ರಮುಖ ತಂಡವಾಗಿರುವ ಪೇಶಾವರ ಝಲ್ಮಿ ಮಾಲಿಕ ಜಾವೇದ್‌ ಅಫ್ರಿದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next