Advertisement

ಭಗತ್ ಸಿಂಗ್ ಗೆ ಶೌರ್ಯ ಪ್ರಶಸ್ತಿ ನೀಡಿ; ಪಾಕ್ ಸರ್ಕಾರಕ್ಕೆ ಆಗ್ರಹ

11:42 AM Jan 19, 2018 | Sharanya Alva |

ಲಾಹೋರ್‌: ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿ “ನಿಶಾನ್‌-ಎ-ಹೈದರ್‌’ ಪುರಸ್ಕಾರವನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ಗೆ ಮರಣೋತ್ತರವಾಗಿ ನೀಡಬೇಕೆಂದು ಪಂಜಾಬ್‌ ಪ್ರಾಂತ್ಯದ “ಭಗತ್‌ ಸಿಂಗ್‌ ಸ್ಮಾರಕ ಫೌಂಡೇಶನ್‌’ ಅಲ್ಲಿನ ಸರ್ಕಾರವನ್ನು ಆಗ್ರಹಿಸಿದೆ.

Advertisement

ಇದಲ್ಲದೆ, ಪಾಕಿಸ್ತಾನದ ಲಾಹೋರ್‌ನ ಶಾಡ್ಮನ್‌ ಚೌಕ್‌ ಗೆ ಭಗತ್‌ ಸಿಂಗ್‌ ಚೌಕ್‌ ಎಂದು ಮರುನಾಮಕರಣ ಮಾಡಬೇಕೆಂದೂ ಫೌಂಡೇಶನ್‌ ಆಗ್ರಹಿಸಿದೆ. 

ತನ್ನ ಆಗ್ರಹಕ್ಕೆ ಪೂರಕವಾಗಿ, “ಪಾಕಿಸ್ತಾನದ ಜನಕ ಮೊಹಮ್ಮದ್‌ ಅಲಿ ಜಿನ್ನಾ ಅವರು ಭಗತ್‌ಸಿಂಗ್‌ ಅವರಂಥ ಕೆಚ್ಚೆದೆಯ ದೇಶಪ್ರೇಮಿ ಮತ್ತೂಬ್ಬರಿಲ್ಲ ಎಂದಿದ್ದರು’ ಎಂದೂ ಅರ್ಜಿಯಲ್ಲಿ ಉಲ್ಲೇಖೀಸಿದೆ.

ಲಾಹೋರ್‌ನ ಶಾಡ್ಮನ್‌ ಚೌಕ್‌ ಗೆ ಭಗತ್‌ ಸಿಂಗ್‌ ಚೌಕ್‌ ಎಂದು ಮರುನಾಮಕರಣ ಮಾಡಬೇಕೆಂಬ ಫೌಂಡೇಶನ್ ಆಗ್ರಹಕ್ಕೆ ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಎಂದು ಘೋಷಿಸಲ್ಪಟ್ಟ ಹಫೀಜ್ ಸಯೀದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next