Advertisement

ಕೋವಿಡ್‌ನಿಂದ ಹೈರಾಣಾದ ಮುಂಬಯಿಗೆ ಚಂಡಮಾರುತದ ಗಂಡಾಂತರ

06:21 PM Jun 02, 2020 | sudhir |

ಮುಂಬಯಿ: ಅರಬಿ ಸಮುದ್ರದಲ್ಲಿ ಚಂಡಮಾರುತ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಕೋವಿಡ್‌ ವೈರಸ್‌ನಿಂದ ಈಗಾಗಲೇ ಹೈರಾಣಾಗಿರುವ ಮುಂಬಯಿಗೆ ಚಂಡಮಾರುತ ಇನ್ನೊಂದು ಗಂಡಾಂತರ ತಂದೊಡ್ಡಿದೆ.

Advertisement

ಒಂದು ವೇಳೆ ಈ ವಾರ ಚಂಡಮಾರುತ ಮುಂಬಯಿಗೆ ಅಪ್ಪಳಿಸಿದ್ದೇ ಆದಲ್ಲಿ ಅದು ಮುಂಬಯಿ ಮಟ್ಟಿಗೆ ಇತಿಹಾಸ ಪುಸ್ತಕದಲ್ಲಿ ದಾಖಲಾಗಲಿದೆ. ಕಾರಣ ಇದು ಮುಂಬಯಿಗೆ ಬಂದೆರಲಿಗಲಿರುವ ಮೊದಲ ಚಂಡಮಾರುತ. ಈಗಾಗಲೇ ಇದಕ್ಕೆ ನಿಸರ್ಗ ಎಂದು ಹೆಸರಿಡಲಾಗಿದ್ದು, ಈ ಮಾಸದಲ್ಲಿ ಸೃಷ್ಟಿಯಾಗಿರುವ ಎರಡನೇ ಚಂಡಮಾರುತವಾಗಿವೆ. ಭಾರತದ ಪಾಲಿಗೆ ಆಂಫಾನ್‌ ಚಂಡ ಮಾರುತದ ಬಳಿಕ ನಿಸರ್ಗ ಚಂಡ ಮಾರುತವೂ ಅತಿ ಹೆಚ್ಚು ಭೀತಿಯನ್ನು ಸೃಷ್ಟಿಸಿದೆ.

ಮುಂಬಯಿಂದ ಕೇವಲ 110 ಕಿ.ಮೀ. ದೂರದಿಂದ ಜೂ.3ರಂದು ಚಂಡಮಾರುತ ಬೀಸಿ ಬರಲಿದೆ ಎಂದು ಹೇಳಲಾಗಿದೆ. ಇದರಿಂದ ಮಹಾರಾಷ್ಟ್ರ, ಗೋವಾ, ಗುಜರಾತ್‌ ಕರಾವಳಿಯಲ್ಲಿ ತೀವ್ರ ಮಳೆ ಸುರಿಯುವ ನಿರೀಕ್ಷೆ ಇದೆ. ಗಂಟೆಗೆ 115 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದ್ದು ಇದು 125 ಕಿ.ಮೀ. ವೇಗದ ವರೆಗೆ ಹೋಗಬಹುದು ಎಂದು ಹೇಳಲಾಗಿದೆ.

ಇದೇ ಮೊದಲು
ಮುಂಬಯಿ ಪಾಲಿಗೆ ಈ ಚಂಡಮಾರುತದ ಹಾವಳಿ ಇದೇ ಮೊದಲು. 1882ರಲ್ಲಿ ಬಾಂಬೆ ಸೈಕ್ಲೋನ್‌ನಿಂದ ಸುಮಾರು 1 ಲಕ್ಷ ಜನ ಮೃತಪಟ್ಟಿದ್ದಾರೆ ಎಂಬ ಕಥೆಗಳಿದ್ದರೂ ಇಷ್ಟರವರೆಗೆ ಮುಂಬಯಿ ಮೇಲೆ ಚಂಡಮಾರುತ ಬೀಸಿದ ಉದಾಹರಣೆಗಳಿಲ್ಲ.
ಮುಂಬಯಿ ಅರಬಿ ಸಮುದ್ರದ ಭಾಗ ಚಂಡಮಾರುತದ ಹಾವಳಿಯಿಲ್ಲದ ಪ್ರದೇಶದಲ್ಲಿದ್ದು, ಈ ಭಾಗದಲ್ಲಿ ವಾಯುಭಾರ ಕುಸಿದು ಚಂಡಮಾರುತ ರೂಪು ತಳೆಯುವುದು ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ಈ ಭಾಗದಲ್ಲಿ ಸಮುದ್ರ ಶಾಂತವಾಗಿಯೂ ಇರುತ್ತದೆ.

ಸಾಮಾನ್ಯವಾಗಿ ಚಂಡಮಾರುತ ಅರಬಿ ಸಮುದ್ರದಲ್ಲಿ ಸೃಷ್ಟಿಯಾದರೂ ಅದು ಒಮಾನ್‌ ಮತ್ತು ಗಲ್ಫ್ ಏಡೆನ್‌ನತ್ತ ಸಾಗುತ್ತವೆ. ಅಥವಾ ಗುಜರಾತ್‌ನ ಉತ್ತರ ಭಾಗದತ್ತ ಹೋಗುತ್ತವೆ. 1998ರಲ್ಲಿ ಸೃಷ್ಟಿಯಾದ ಚಂಡಮಾರುತದಿಂದ ಅಥವಾ ಕಳೆದ ವರ್ಷದ ವಾಯು ಚಂಡಮಾರುತ ಗುಜರಾತ್‌ ಕರಾವಳಿಯತ್ತ ಹೋಗಿತ್ತು.

Advertisement

ಉಪಉಷ್ಣವಲಯದ ಶ್ರೇಣಿಯ ಭಾಗವಾಗದ್ದರಿಂದ ಇಲ್ಲಿ ಚಂಡಮಾರುತಗಳು ಸೃಷ್ಟಿಯಾದರೂ ಅದು ಭೂಮಿಗೆ ಅಪ್ಪಳಿಸುವ ಮೊದಲು ದುರ್ಬಲವಾಗುತ್ತದೆ ಎಂದು ಪರಿಣತರು ಹೇಳುತ್ತಾರೆ.

ಇತ್ತೀಚೆಗೆ ಕೇರಳ ತೀರದಲ್ಲಿ ಚಂಡಮಾರುತ ಸೃಷ್ಟಿಯಾಗಿತ್ತು. ಇದಕ್ಕೆ ಕಾರಣ ಕಡಲ ತೀರದಲ್ಲಿ ಹೆಚ್ಚಿನ ಉಷ್ಣತೆ. ಅಲ್ಲದೇ ಭೂಮಿ ಬದಿಯ ವಾತಾವರಣದ ಒತ್ತಡ. ಮುಂಬಯಿ ಮಟ್ಟಿಗೆ ಅಲ್ಲಿನ ನಿಸರ್ಗ ವ್ಯವಸ್ಥೆಗಳು ಚಂಡಮಾರುತ ತೀವ್ರವಾಗುವಂತೆ ಮಾಡುವುದಿಲ್ಲ ಎಂದೂ ಹೇಳಲಾಗಿದೆ.

ಇದರೊಂದಿಗೆ 2015ರ ಬಳಿಕ ಅರಬಿ ಸಮುದ್ರದಲ್ಲಿ ಚಂಡಮಾರುತಗಳು ಹೆಚ್ಚಾಗಿ ಸೃಷ್ಟಿಯಾಗುತ್ತಿರುವುದನ್ನೂ ಗುರುತಿಸಲಾಗಿದೆ. ಅರಬಿ ಸಮುದ್ರವೂ ಹೆಚ್ಚಿನ ತಾಪಮಾನ ಕಾಣುತ್ತಿರುವಂತೆ ಚಂಡಮಾರುತಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಕಳೆದ ಒಂದು ವರ್ಷದಲ್ಲಿ 5-8 ಚಂಡಮಾರುತ ಸೃಷ್ಟಿಯಾಗಿರುವುದನ್ನು ಗಮನಿಸಲಾಗಿತ್ತು.

ಆಸ್ಪತ್ರೆಗಳು ಹೈ ಅಲರ್ಟ್‌
ಕೋವಿಡ್‌ ವಿಚಾರಕ್ಕೆ ಮುಂಬಯಿ ಆಸ್ಪತ್ರೆಗಳು ಹೈ ಅಲರ್ಟ್‌ ಆಗಿರುವಂತೆ ಈಗ ಚಂಡಮಾರುತದ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಆಗಿವೆ. ಚಂಡಮಾರತ ಸಂತ್ರಸ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವತ್ತ ಗಮನಹರಿಸಲಾಗಿದೆ. ಇದರೊಂದಿಗೆ ರಾಸಾಯನಿಕ ಕಾರ್ಖಾನೆಗಳಿಗೂ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗಿದೆ. ಜುಹು ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸುರಕ್ಷಿತವಾಗಿ ನಿಲ್ಲಿಸುವಂತೆ ಹೇಳಲಾಗಿದೆ.

25 ಎನ್‌ಡಿಆರ್‌ಎಫ್ ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳದ ತಂಡಗಳು ಸಿದ್ಧವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next