Advertisement

ಧಾರ್ಮಿಕ ಕಾರ್ಯಗಳಿಂದ ಕೆಲಸಗಳು ನಿರ್ವಿಘ್ನ

03:27 PM Feb 27, 2017 | Team Udayavani |

ಬಸ್ರೂರು:  ಮನುಷ್ಯನಿಗೆ ಹಸಿವಾದಾಗ ಆಹಾರ ಸೇವಿಸುತ್ತಾನೆ. ಹಾಗೆಯೇ ಆತ್ಮ ಮತ್ತು ಮನಸ್ಸಿಗೆ  ಹಸಿವಾದಗ ಶಾಂತಿ ಸಿಗಬೇಕಾದರೆ ಧಾರ್ಮಿಕ ಕಾರ್ಯಗಳು ನಡೆಯ ಬೇಕು. ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ  ನಮ್ಮ ಕೆಲಸಗಳು ನಿರ್ವಿಘ್ನದಿಂದ ಸಾಗುತ್ತವೆ. ಒಳ್ಳೆಯ ವಿಚಾರಗಳನ್ನು   ಸ್ವೀಕರಿಸುವುದರಿಂದ ಜೀವನ  ಪಾವನವಾಗುತ್ತದೆ. ಭಗವಂತನ ಆರಾಧನೆಯಿಂದ ನಮಗೆ ಯಶಸ್ಸು ದೊರೆಯುತ್ತದೆ. ಭಗವಂತನ ಆರಾಧನೆ ಯಂತೆ ಪ್ರಕೃತಿ ಆರಾಧನೆಯೂ  ಮುಖ್ಯವಾಗುತ್ತದೆ ಎಂದು  ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ  ಅವರು ನುಡಿದರು.

Advertisement

ಅವರು ಕಂದಾವರ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ  ಮತ್ತು  ಮೂಡ್ಲಕಟ್ಟೆ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ  ಮೂಡ್ಲಕಟ್ಟೆ ಶಾಲೆಯಲ್ಲಿ  ನಡೆದ ಧಾರ್ಮಿಕ ಸಭೆಯಲ್ಲಿ ಆಶೀ ರ್ವಚನ ನೀಡಿದರು.ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ, ತಾ.ಪಂ. ಸದಸ್ಯೆ ಚಂದ್ರಲೇಖಾ ಎಸ್‌. ಪೂಜಾರಿ, ಶ್ರೀ ಕ್ಷೇತ್ರ ಧ. ಯೋಜನಾಧಿಕಾರಿ ಅಮರ ಪ್ರಸಾದ ಶೆಟ್ಟಿ, ಬಸೂÅರು ವಲಯದ ಅಧ್ಯಕ್ಷ ಶಶಿಕಾಂತ್‌, ಕಂದಾವರ ಗ್ರಾ.ಪಂ. ಸದಸ್ಯರಾದ ಸಂತೋಷ  ಪೂಜಾರಿ, ಸುರೇಂದ್ರ ಶೇರೆಗಾರ್‌, ವೇ|ಮೂ| ಕೃಷ್ಣಮೂರ್ತಿ ಪುರಾಣಿಕ್‌, ಮೂಡ್ಲಕಟ್ಟೆ ಶಾಲಾ ಮುಖ್ಯೋಪಾಧ್ಯಾಯ  ಕೆ. ಉಮೇಶ್‌, ಪ್ರಗತಿ ಬಂಧು ಅಧ್ಯಕ್ಷ ಸುರೇಶ್‌ ದೇವಾಡಿಗ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮದ್ಯ ಮುಕ್ತರನ್ನು ಅಭಿನಂದಿಸಲಾಯಿತು. ವಿಜೇತ ಕ್ರೀಡಾಪಟುಗಳಿಗೆ ಬಹು ಮಾನ ವಿತರಿಸಲಾಯಿತು. ವಲಯ ಮೇಲ್ವಿಚಾರಕ ಮಂಜುನಾಥ್‌ ಸ್ವಾಗತಿಸಿ ದರು. ಜಗದೀಶ್‌, ಮಹಾಬಲೇಶ್ವರ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ಶೇರೆಗಾರ್‌ ವಂದಿಸಿದರು. ಬಳಿಕ ಜಿಲ್ಲಾ ಮಟ್ಟದ ಕುಣಿತ ಭಜನ ಸ್ಪರ್ಧೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next