Advertisement

Live; ಆರ್ಥಿಕ ಪ್ಯಾಕೇಜ್ –ಪ್ರಧಾನಮಂತ್ರಿ ಇ-ವಿದ್ಯಾ ಯೋಜನೆ, ರಾಜ್ಯಗಳಿಗೆ 4,100 ಕೋಟಿ ರೂ.

08:43 AM May 18, 2020 | Nagendra Trasi |

ನವದೆಹಲಿ: ಕೋವಿಡ್ ಸಂಬಂಧಿತ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯಿಂದ ಕುಸಿದಿರುವ ದೇಶದ ಆರ್ಥಕತೆಗೆ ಬಲ ತುಂಬಲು ಹಾಗೂ ಸಂಕಷ್ಟದಲ್ಲಿರುವ ದೇಶವಾಸಿಗಳ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಆತ್ಮ ನಿರ್ಭರ ಭಾರತ ವಿಶೇಷ ಆರ್ಥಿಕ ಪ್ಯಾಕೇಜ್ ನ 5ನೇ ಕಂತಿನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ನೀಡಿದ್ದಾರೆ.

Advertisement

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಹೈಲೈಟ್ಸ್:

*ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅಗತ್ಯ ಉಪಕರಣಗಳ ಖರೀದಿಗಾಗಿ ರಾಜ್ಯಗಳಿಗೆ 15 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ವೈದ್ಯಕೀಯ ಸೇವೆ ನೀಡುವವರ ರಕ್ಷಣೆಗೆ ಆದ್ಯತೆ ನೀಡಲಾಗಿದೆ.

*ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಡಿಟಿಎಚ್ ನಿಂದ ಪಾಠಗಳನ್ನು ನೇರ ಪ್ರಸಾರ ಮಾಡಲು ಸುಲಭವಾಗಲಿದೆ. ಡಿಟಿಎಚ್ ನಂಥ ಕೆಲ ಖಾಸಗಿ ಸಂಸ್ಥೆಗಳ ಜತೆ ಕೇಂದ್ರ ಒಪ್ಪಂದ ಮಾಡಿಕೊಂಡಿದೆ.

*ಕಂಪನಿಗಳ ಆಡಳಿತ ಮಂಡಳಿ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಬಹುದು.

Advertisement

*ದೇಶದ 2.2 ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಿವಿಧ ರಾಜ್ಯ ಸರ್ಕಾರಗಳು 3,950 ಕೋಟಿ ಆರ್ಥಿಕ ನೆರವಿನ ಹಣ ಬಿಡುಗಡೆ

*ಒನ್ ಕ್ಲಾಸ್, ಒನ್ ಚಾನೆಲ್; ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಕೇಂದ್ರ

*ಗ್ರಾಮೀಣ ಆರ್ಥಿಕತೆಯನ್ನು ಮೇಲಕ್ಕೆತ್ತಬೇಕಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಆರೋಗ್ಯ ಲ್ಯಾಬ್

*ಲಾಕ್ ಡೌನ್ ನಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ಸುಸ್ತಿದಾರರು ಎಂದು ಘೋಷಿಸುವುದಿಲ್ಲ

*ಪ್ರಧಾನಮಂತ್ರಿ ಇ-ವಿದ್ಯಾ ಯೋಜನೆ ಜಾರಿಗೊಳಿಸಲಾಗುವುದು

*ಸ್ವಯಂ ಪ್ರಭಾ ಡಿಟಿಎಚ್ ಚಾನೆಲ್ ಗಳ ಅನಾವರಣ

*ಮನ್ರೇಗಾ ಯೋಜನೆಗೆ (ಗ್ರಾಮೀಣ ಉದ್ಯೋಗ ಯೋಜನೆ)ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂಪಾಯಿ

*300ಕ್ಕೂ ಅಧಿಕ ಪಿಪಿಇ ತಯಾರಕರಿಂದ ಈವರೆಗೆ 51 ಲಕ್ಷ ಪಿಪಿಇ ಕಿಟ್ಸ್ ಸರಬರಾಜು ಮಾಡಲಾಗಿದೆ.

*ಈ ಬಿಕ್ಕಟ್ಟನ್ನು ನಾವು ಅವಕಾಶವನ್ನಾಗಿ ಬಳಸಿಕೊಳ್ಳಬೇಕಾಗಿದೆ. ಆರೋಗ್ಯ ಕ್ಷೇತ್ರಕ್ಕಾಗಿ ರಾಜ್ಯಗಳಿಗೆ 4100 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ.

*ದೇಶದ 20 ಕೋಟಿ ಮಹಿಳೆಯರ ಜನ್ ಧನ್ ಖಾತೆದಾರರಿಗೆ ಹಣವನ್ನು ವರ್ಗಾಯಿಸಲಾಗಿದೆ.

*ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ನ ಶೇ.85ರಷ್ಟು ವೆಚ್ಚ ಭರಿಸಿದೆ.

*ಜಾಗತಿಕ ಕೋವಿಡ್ 19 ಸೋಂಕನ್ನು ಭಾರತ ತಡೆಯುವಲ್ಲಿ ಕಠಿಣವಾಗಿ ಪರಿಶ್ರಮಪಟ್ಟಿದೆ. ನಾವು ಎಫ್ ಸಿಐ ಮತ್ತು ಎನ್ ಎಎಫ್ ಇಡಿ ಜತೆಗೂಡಿ ಜನರಿಗೆ ಆಹಾರವನ್ನು ನೀಡಿದ್ದೇವೆ.

*ಕಲ್ಲಿದ್ದಲು, ಗಣಿಗಾರಿಕೆ, ರಕ್ಷಣಾ ಉತ್ಪಾದನೆ, ವಿಮಾನ ನಿಲ್ದಾಣ ಆಡಳಿತ ಸೇರಿದಂತೆ ಎಂಟು ಸೆಕ್ಟರ್ ಗಳಿಗೆ ಪ್ಯಾಕೇಜ್ ಘೋಷಿಸುವ ಸಾಧ್ಯತೆ.

*ವಿಶೇಷ ಆರ್ಥಿಕ ಪ್ಯಾಕೇಜ್ ನ 5ನೇ ಕಂತಿನ ವಿವರ ಪ್ರಕಟಿಸುತ್ತಿರುವ ಸಚಿವೆ ನಿರ್ಮಲಾ ಸೀತಾರಾಮನ್

Advertisement

Udayavani is now on Telegram. Click here to join our channel and stay updated with the latest news.

Next