Advertisement

ಫಲಿತಾಂಶದ ಬಳಿಕ ಷೇರುಪೇಟೆ ಮತ್ತಷ್ಟು ಏರಿಕೆ: ನಿರ್ಮಲಾ ಸೀತಾರಾಮನ್‌

11:27 AM May 31, 2024 | |

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆಯ ಷೇರು ಪೇಟೆ ಚೇತರಿಕೆ ಕಾಣಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರೇಟಿಂಗ್ಸ್‌ ಸಂಸ್ಥೆ ಎಸ್‌ ಆ್ಯಂಡ್‌ ಪಿ ದೇಶದ ಅರ್ಥ ವ್ಯವಸ್ಥೆ ಬಗ್ಗೆ ನೀಡಿದ ರೇಟಿಂಗ್ಸ್‌ ದೇಶದ ಆರ್ಥಿಕತೆಗೆ ಶುಭ ಶಕುನವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಜೂ.4ರಂದು ಬಿಜೆಪಿಗೆ ಉತ್ತಮ ಫ‌ಲಿತಾಂಶ ಬರಲಿದ್ದು ಅದರರ್ಥ ದೇಶದಲ್ಲಿ ಷೇರು ಮಾರುಕಟ್ಟೆ ಚೇತರಿಕೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶ ಉತ್ತಮ ಆರ್ಥಿಕ ವ್ಯವಸ್ಥೆ ಹೊಂದಬೇಕಾದರೆ ದೂರದೃಷ್ಟಿಯ ನಾಯಕತ್ವದ ಅಗತ್ಯವಿದೆ.

ಹಣಕಾಸಿನ ವಿವೇಚನೆ, ಮಾಡುವ ವೆಚ್ಚದಿಂದ ಕೇವಲ ಆದಾಯವಲ್ಲ, ಹೆಚ್ಚಿನ ಆಸ್ತಿ ಸೃಷ್ಟಿ ಮಾಡುವ ಜಾಣ್ಮೆ ಹೊಂದಿರುವಂತಹ ನಾಯಕತ್ವ ಮುಖ್ಯವಾಗುತ್ತದೆ ಎಂದು ಹೇಳಿದರು.

Advertisement

ಸೆನ್ಸೆಕ್ಸ್‌ ಕುಸಿತ
ಮುಂಬೈ: ಬಾಂಬೆ ಷೇರು ಪೇಟೆಯಲ್ಲಿ ಗುರುವಾರ ಸೂಚ್ಯಂಕ 617.30 ಅಂಕ ಕುಸಿದಿದೆ. ಹೀಗಾಗಿ ದಿನಾಂತ್ಯಕ್ಕೆ 73885.60ರಲ್ಲಿ ಮುಕ್ತಾಯಗೊಂಡಿತು. ನಿಫ್ಟಿ ಸೂಚ್ಯಂಕ 216.05 ಇಳಿಕೆಯಾಗಿ 22488.65ರಲ್ಲಿ ಮುಕ್ತಾಯಗೊಂಡಿತ್ತು. ಬುಧವಾರ ಕೂಡ ಸೂಚ್ಯಂಕ 667 ಅಂಕ ಕುಸಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next