Advertisement

Nirmala Sitharaman: 2ನೇ ಬಾರಿ ಮೋದಿ ಸಂಪುಟದ ಸದಸ್ಯೆ

01:32 AM Jun 10, 2024 | Team Udayavani |

ಬೆಂಗಳೂರು: ಮೂಲತಃ ತಮಿಳುನಾ ಡಿನವರಾದ ನಿರ್ಮಲಾ ಸೀತಾರಾಮನ್‌ ಅವರು ನಾರಾಯಣ ಸೀತಾರಾಮನ್‌ ಹಾಗೂ ಸಾವಿತ್ರಿ ಪುತ್ರಿಯಾಗಿ 1959ರ ಆ. 18ರಂದು ಜನಿಸಿದರು.

Advertisement

ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುವ ಅವರು, ಜೆಎನ್‌ಯುನಲ್ಲಿ ಎಂ.ಫಿಲ್‌ ಪಡೆದಿದ್ದಾರೆ. 2003-2005 ರವರೆಗೆ ರಾಷ್ಟ್ರೀಯ ಮಹಿ ಳಾ ಆಯೋಗದ ಸದಸ್ಯೆ ಯಾಗಿ ಕಾರ್ಯಾರಂಭ ಮಾಡಿದರು. ಪತಿ ಪರಕ್ಕಳ ಪ್ರಭಾಕರ್‌ ಬಿಜೆಪಿಯೇತರ ಪಕ್ಷ ದಲ್ಲಿದ್ದರೂ ನಿರ್ಮಲಾ ಮಾತ್ರ 2008ರಲ್ಲಿ ಅಧಿ ಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.

ರಾಷ್ಟ್ರೀಯ ವಕ್ತಾರೆಯಾಗಿಯೂ ಕೆಲಸ ಮಾಡಿದ್ದರು. 2014ರಲ್ಲಿ ಆಂಧ್ರಪ್ರದೇ ಶದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದ ಅವರನ್ನು ನರೇಂದ್ರ ಮೋದಿ ಸಂಪುಟಕ್ಕೆ ಸೇರಿಸಿಕೊಂಡರು. 2014ರ ಮೇ 26ರಿಂದ ನ.9 ರವರೆಗೆ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ರಾಜ್ಯ ಖಾತೆ ಸಚಿವೆ ಯಾಗಿ ಮೊದಲ ಬಾರಿಗೆ ಮೋದಿ ಸಂಪುಟದಲ್ಲಿ ಸೇವೆ ಆರಂಭಿ ಸಿದ ಅವರು, 2016ರಲ್ಲಿ ರಾಜ್ಯ ಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕರ್ನಾ ಟಕದಿಂದ ರಾಜ್ಯಸಭೆಗೆ ಮರುಆಯ್ಕೆ ಯಾದರು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆಯಾಗಿ ಸ್ವತಂತ್ರ ಖಾತೆಯನ್ನು 2017 ರ ಸೆ.3 ರವರೆಗೆ ನಿಭಾಯಿಸಿ ಸೈ ಎನಿಸಿಕೊಂಡ ಅವರಿಗೆ 2017ರ ಸೆ. 3ರಿಂದ ರಕ್ಷಣ ಖಾತೆಯನ್ನು ನೀಡ ಲಾಯಿತು. 2022 ರಲ್ಲಿ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಈವರೆಗೂ ಕೇಂದ್ರ ಹಣಕಾಸು ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next