Advertisement

ಕೃಷಿ, ಮತ್ಸ್ಯೋದ್ಯಮ, ಹೈನುಗಾರಿಕೆ ಕ್ಷೇತ್ರದ ಬಲವರ್ಧನೆಗೆ ‘ನಿರ್ಭರ ಭಾರತ ಮಿಷನ್’ ವಿಶೇಷ ಗಮನ

08:25 AM May 16, 2020 | Hari Prasad |

ನವದೆಹಲಿ: ಕೋವಿಡ್ ಸಂಬಂಧಿತ ದೇಶವ್ಯಾಪಿ ಲಾಕ್ ಡೌನ್ ಪರಿಸ್ಥಿತಿಯಿಂದ ಕುಸಿದಿರುವ ದೇಶದ ಆರ್ಥಿಕತೆಗೆ ಬಲ ತುಂಬಲು ಹಾಗೂ ಸಂಕಷ್ಟದಲ್ಲಿರುವ ದೇಶವಾಸಿಗಳ ಸಹಾಯಕ್ಕಾಗಿ ಕೇಂದ್ರ ಸರಕಾರವು ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ‘ಆತ್ಮ ನಿರ್ಭರ ಭಾರತ’ ವಿಶೇಷ ಆರ್ಥಿಕ ಪ್ಯಾಕೇಜ್ ನ ಮೂರನೇ ಕಂತಿನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ನೀಡಿದ್ದಾರೆ.

Advertisement

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ಆರ್ಥಿಕ ಪ್ಯಾಕೇಜ್ ನ ಮುಖ್ಯಾಂಶಗಳು:

– ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ಕೃಷಿಸಂಬಂಧಿತ ಕ್ಷೇತ್ರಗಳಿಗೆ ನೆರವು ಘೋಷಣೆ.

– ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿಗಳ ಘೋಷಣೆ.

– ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಲಕ್ಷ ರೂಪಾಯಿಗಳು ಮೀಸಲು. ಸ್ಥಳೀಯ ಉತ್ಪನ್ನಗಳು ದೇಶವ್ಯಾಪಿ ಗ್ರಾಹಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಈ ಯೋಜನೆಯ ಮೊತ್ತ ಬಳಕೆ. ಇದರಿಂದ 2 ಲಕ್ಷ ಮೈಕ್ರೋ ಫುಡ್ ಇಂಡಸ್ಟ್ರಿಗಳಿಗೆ ಪ್ರಯೋಜನವಾಗಲಿದೆ.

Advertisement

ಉದಾಹರಣೆಗೆ: ಕರ್ನಾಟಕವನ್ನು ರಾಗಿ ಕ್ಲಸ್ಟರ್, ಬಿಹಾರವನ್ನು ಬೆಣ್ಣೆ ಕ್ಲಸ್ಟರ್, ಕಾಶ್ಮೀರನ್ನು ಕೇಸರಿ ಕ್ಲಸ್ಟರ್, ಆಂಧ್ರವನ್ನು ಮೆಣಸಿನ ಕ್ಲಸ್ಟರ್, ಹೀಗೆ ನಮ್ಮ ವಿವಿಧ ರಾಜ್ಯಗಳಲ್ಲಿ ಹೆಸರುವಾಸಿಯಾಗಿರುವ ಉತ್ಪನ್ನಗಳ ಬ್ರ್ಯಾಂಡ್ ಸೃಷ್ಟಿಸಲಾಗುವುದು.

– ಕಳೆದ 2 ತಿಂಗಳುಗಳಲ್ಲಿ ಕೃಷಿ ಕ್ಷೇತ್ರದ 11 ವಿಭಾಗಗಳನ್ನು ಬಲಗೊಳಿಸಲು ಕೇಂದ್ರ ಸರಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ.

– ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಕಳೆದ ಬಜೆಟ್ ಸಂದರ್ಭದಲ್ಲಿ ಘೋಷಿಸಲಾಗಿತ್ತು. ಇದರಡಿಯಲ್ಲಿ 20 ಲಕ್ಷ ಕೋಟಿ ರೂಪಾಯಿಗಳನ್ನು ಘೋಷಿಸಲಾಗುತ್ತದೆ. ಈ ಮೂಲಕ 65 ಲಕ್ಷ ಜನರಿಗೆ ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ಉದ್ಯೋಗವಕಾಶವನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮೀನುಗಾರರಿಗೆ ಹೊಸ ದೋಣಿಗಳನ್ನು ಒದಗಿಸುವುದು, ಮೀನುಗಾರಿಕಾ ಬಂದರುಗಳನ್ನು ನಿರ್ಮಿಸುವುದು, ದೋಣಿಗಳಿಗೆ ಮತ್ತು ಮೀನುಗಾರರಿಗೆ ವಿಮಾ ಸೌಲಭ್ಯ ಇತ್ಯಾದಿ ಸೌಲಭ್ಯಗಳನ್ನು ಈ ಯೋಜನೆಯಡಿಯಲ್ಲಿ ಒದಗಿಸಲಾಗುವುದು.

– ಪಶುಸಂಗೋಪನೆಗೆ ಬೆಂಬಲ: ಎಲ್ಲಾ ಹಸುಗಳಿಗೆ, ಎಮ್ಮೆಗಳಿಗೆ, ಆಡುಗಳಿಗೆ ಲಸಿಕೆ ಹಾಕಲು ಕ್ರಮ. 1.5 ಕೋಟಿ ಹಸು ಮತ್ತು ಎಮ್ಮೆಗಳಿಗೆ ಇದುವರೆಗೆ ಲಸಿಕೆ ಹಾಕುವ ಕಾರ್ಯ ನಡೆದಿದೆ. 53 ಕೋಟಿ ಪಶುಗಳಿಗೆ ಲಸಿಕೆ ಹಾಕುವ ಯೋಜನೆ ಘೋಷಣೆ. ಇದರಿಂದ ಹೈನುಗಾರಿಕೆಗೆ ಶಾಪವಾಗಿರುವ ಕಾಯಿ-ಬಾಯಿ ರೋಗಕ್ಕೆ ತಿಲಾಂಜಲಿ ನೀಡುವ ಗುರಿ ಹೊಂದಲಾಗಿದೆ. ಲಸಿಕೆ ಕಾರ್ಯಗಳಿಗಾಗಿ 13, 343 ಕೋಟಿ ರೂಪಾಯಿ ನಿಗದಿ.

– ಡೈರಿ ಉತ್ಪನ್ನಗಳ ಪ್ರೋತ್ಸಾಹಕ್ಕೆ 15 ಸಾವಿರ ಕೋಟಿ ರೂಪಾಯಿ ನಿಗದಿ. ಈ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೂ ಉತ್ತೇಜನ. ಪಶು ಆಹಾರ ಉತ್ಪಾದನೆಗೆ ಉತ್ತೇಜನ ಈ ಮೂಲಕ ಇವುಗಳ ರಫ್ತು ಹೆಚ್ಚಳಕ್ಕೆ ಕ್ರಮ.

– ಔಷಧಿ ಗುಣವಿರುವ ಗಿಡಗಳ ಬೆಳವಣಿಗೆ ಉತ್ತೇಜನಕ್ಕೆ 4 ಸಾವಿರ ಕೋಟಿ ರೂಪಾಯಿ ಮೀಸಲು. ಗಂಗಾ ನದಿಯ ಎರಡೂ ಕಿನಾರೆಗಳಲ್ಲಿ ಔಷಧೀಯ ಸಸ್ಯಗಳ ಕೃಷಿಗೆ ಕ್ರಮ. 10 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಔಷಧೀಯ ಗಿಡಗಳ ಕೃಷಿಗೆ ಕ್ರಮ.

– ಜೇನು ಸಾಕಾಣಿಕೆಗೆ ಉತ್ತೇಜನ. ಇದರಿಂದ ಪರಿಸರ ಸಮತೋಲನಕ್ಕೂ ಪೂರಕ. ಇದಕ್ಕಾಗಿ 500 ಕೋಟಿ ರೂಪಾಯಿ ನಿಗದಿ ಮತ್ತು ಗ್ರಾಮೀಣ ಪ್ರದೇಶದ 2 ಕೋಟಿ ಜೇನು ಹುಳು ಸಾಕಾಣೆಗಾರರಿಗೆ ಪ್ರಯೋಜನ.

– ಈಗಾಗಲೇ ಚಾಲ್ತಿಯಲ್ಲಿರುವ ಅಪರೇಷನ್ ಗ್ರೀನ್ ಯೋಜನೆಗೆ 500 ಕೋಟಿ ರೂಪಾಯಿಗಳ ಹೆಚ್ಚುವರಿ ನೆರವು. ಇದರಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳ ಸಾಗಾಟ ಹಾಗೂ ಕೋಲ್ಡ್ ಸ್ಟೋರೇಜ್ ಸಂಗ್ರಹಕ್ಕೆ ಉತ್ತೇಜನ. ಸದ್ಯಕ್ಕೆ ಇದು ಪೈಲಟ್ ಅಧ್ಯಯನ ರೂಪದಲ್ಲಿರುತ್ತದೆ. ರೈತರು ಬೆಳೆದ ಶೀಘ್ರ ಹಾಳಾಗುವ ಕೃಷಿ ಉತ್ಪನ್ನಗಳನ್ನು ಕಾಪಾಡಲು ಮತ್ತು ಸೂಕ್ತ ಬೆಲೆಯಲ್ಲಿ ವಿಕ್ರಯಿಸಲು ಈ ಯೋಜನೆ ಉತ್ತೇಜನ ನೀಡುವುದು.

– ಅತ್ಯಗತ್ಯ ವಸ್ತುಗಳ ಕಾಯ್ದೆ, 1955ರಿಂದ ಈ ಕಾಯ್ದೆ ಜಾರಿಯಲ್ಲಿದೆ, ಇದಕ್ಕೆ ತಿದ್ದುಪಡಿ ತರಲು ನಿರ್ಧಾರ. ಇದರಿಂದ ರೈತರು ಬೆಳೆದ ಬೆಲೆಗಳಿಗೆ ಉತ್ತಮ ಬೆಲೆ ಒದಗಿಸಲು ಕ್ರಮ. ಎಣ್ಣೆಕಾಳು, ಬೇಳೆ ಕಾಳು, ಆಲೂಗಡ್ಡೆ, ಈರುಳ್ಳಿ ಬೆಳೆಗಳಿಗೆ ಎಲ್ಲಾ ಕಾಲದಲ್ಲೂ ಉತ್ತಮ ಬೆಲೆ ಒದಗಿಸಲು ಇದು ಸಹಕಾರಿ.

– ರೈತರು ತಮ್ಮ ಬೆಲೆಯನ್ನು ಉತ್ತಮ ಬೆಲೆಗೆ ಮಾರಲು ಕೇಂದ್ರೀಯ ಕಾನೂನು ರೂಪಿಸಲು ಕ್ರಮ. ಇದರಿಂದ ರೈತರಿಗೆ ಅಂತರ್ ರಾಜ್ಯ ಮಾರಾಟಕ್ಕಿರುವ ನಿರ್ಬಂಧ ರದ್ದು, ಇ-ಮಾರಾಟ ವ್ಯವಸ್ಥೆಗೆ ಉತ್ತೇಜನ. ಇದರಿಂದಾಗಿ ರೈತರು ತಮ್ಮ ಉತ್ಪನ್ನಗಳನ್ನು ತಮ್ಮ ಇಚ್ಛೆಗೆ ಅನುಸಾರವಾಗಿ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಈಗಿರುವ ನಿರ್ಧಿಷ್ಟ ಪರವಾನಿಗೆದಾರರಿಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲೇಬೇಕಾದ ಅನಿವಾರ್ಯತೆ ಈ ಕಾನೂನಿಂದ ದೂರವಾಗಲಿದೆ.

– ರೈತರು ತಮ್ಮ ಬೆಲೆಗಳನ್ನು ಸಗಟು ಬೆಲೆಗೆ ಮಾರಾಟ ಮಾಡಲು ಕಾನೂನಿನ ಚೌಕಟ್ಟು ರೂಪಣೆ.

– ಅತ್ಯಗತ್ಯ ವಸ್ತುಗಳ ಕಾಯ್ದೆ, 1955ರಿಂದ ಈ ಕಾಯ್ದೆ ಜಾರಿಯಲ್ಲಿದೆ, ಇದಕ್ಕೆ ತಿದ್ದುಪಡಿ ತರಲು ನಿರ್ಧಾರ.

– ಲಾಕ್ ಡೌನ್ ಅವಧಿಯಲ್ಲಿ ಕನಿಷ್ಟ ಬೆಂಬಲ ಬೆಲೆಯಲ್ಲಿ 74,300 ಕೋಟಿ ರೂಪಾಯಿಗಳ ಉತ್ಪನ್ನಗಳ ಖರೀದಿ.

– ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಲಾಕ್ ಡೌನ್ ಅವಧಿಯಲ್ಲಿ ಕುಸಿತ ಕಂಡಿದ್ದ ಕಾರಣ 560 ಲಕ್ಷ ಲೀಟರ್ ಹಾಲನ್ನು ನಾವು ಖರೀದಿಸಿದ್ದೇವೆ ಮತ್ತು ಈ ಮೂಲಕ ದೇಶದ ಹೈನುಗಾರರ ಕೈಗೆ ಈ ಹಣ ನೇರವಾಗಿ ಸಂದಿದೆ.

– ಲಾಕ್ ಡೌನ್ ಸಂದರ್ಭದಲ್ಲಿ ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಡಿ ಲಾಕ್ ಡೌನ್ ಅವಧಿಯಲ್ಲಿ 18,700 ಕೋಟಿ ರೂಪಾಯಿಗಳ ಸಹಾಯ ‍ಧನವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next