Advertisement
ಇದು ದೇಶದ ಅಗ್ರ 10 ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಮಾಹೆ ಈ ಬಾರಿ 4ನೇ ಸ್ಥಾನಕ್ಕೇರಿದ್ದು, ಇದು ಮಾಹೆಯ ಗುಣಮಟ್ಟದ ಶಿಕ್ಷಣ ಹಾಗೂ ಬದ್ಧತೆಯನ್ನು ಪ್ರತಿಪಾದಿಸುತ್ತದೆ.ಒಟ್ಟಾರೆ ಭಾರತದ ಶ್ರೇಯಾಂಕ ದಲ್ಲಿ ಮಾಹೆಯು ಅಗ್ರ 20 ವಿಶ್ವವಿದ್ಯಾ ನಿಲಯಗಳಲ್ಲಿ 14ನೇ ಸ್ಥಾನವನ್ನು ಪಡೆದುಕೊಂಡಿದೆ. ಮಾಹೆಯ ಅನೇಕ ಅಂಗ ಸಂಸ್ಥೆಗಳು ವಿವಿಧ ವಿಭಾಗಗಳ ಅಡಿಯಲ್ಲಿಅಗ್ರ 10 ಸ್ಥಾನಗಳಲ್ಲಿ ಸೇರಿವೆ. ದಂತ ವಿಭಾಗದಲ್ಲಿ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ 2ನೇ ಸ್ಥಾನ ಗಳಿಸಿದೆ.
Related Articles
ಮಾಹೆಯು ಎನ್‌ಐಆರ್‌ಎಫ್ ಶ್ರೇಯಾಂಕದಲ್ಲಿ ಸೇರ್ಪಡೆಗೊಂಡಿರು ವುದು ಶೈಕ್ಷಣಿಕ ಸಾಧನೆ, ಸೃಜನಶೀಲತೆ ಮತ್ತು ಸರ್ವತೋಮುಖ ಬೆಳವಣಿಗೆಗೆ ದೃಢವಾದ ಸಮರ್ಪಣೆಗೆ ಸಾಕ್ಷಿಯಾಗಿದೆ. ಬೆಳವಣಿಗೆ, ಕಲಿಕೆ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸಲು ಬೋಧಕ, ಬೋಧಕೇತರ ಸಿಬಂದಿ ಹಾಗೂ ವಿದ್ಯಾರ್ಥಿಗಳ ಸಂಯೋಜಿತ ಪ್ರಯತ್ನ ಫಲ ನೀಡಿದೆ. ಶಿಕ್ಷಣದ ಗುಣಮಟ್ಟ ಇನ್ನಷ್ಟು ಹೆಚ್ಚಿಸಲು ಮತ್ತು ಸಮಾಜಕ್ಕೆ ಮಹತ್ವದ ಕೊಡುಗೆಗಳನ್ನು ನೀಡಲು ನಾವು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ತಿಳಿಸಿದ್ದಾರೆ.
Advertisement
ಶ್ರೇಷ್ಠತೆ, ಬದ್ಧತೆಯ ಪ್ರತೀಕ: ಡಾ| ಬಲ್ಲಾಳ್ಎನ್ಐಆರ್ಎಫ್ ಶ್ರೇಯಾಂಕದಲ್ಲಿ 6ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿರು ವುದು ಗಮನಾರ್ಹ ಸಾಧನೆಯಾಗಿದೆ. ಇದು ಶ್ರೇಷ್ಠತೆ, ಬದ್ಧತೆಯ ಪ್ರತೀಕ ವಾಗಿದೆ. ಈ ಪ್ರಗತಿಯು ಶೈಕ್ಷಣಿಕ ಕಠಿನತೆ ಮತ್ತು ನಾವೀನ್ಯದ ವಾತಾವರಣವನ್ನು ಬೆಳೆಸುವಲ್ಲಿ ಅಧ್ಯಾಪಕರು, ವಿದ್ಯಾರ್ಥಿ ಗಳು ಮತ್ತು ಸಿಬಂದಿ ಕಠಿನ ಪರಿಶ್ರಮ ಮತ್ತು ಸಮರ್ಪಣೆ ಹೆಚ್ಚಿದೆ. ಇನ್ನೂ ಹೆಚ್ಚಿನ ಎತ್ತರವನ್ನು ಏರಲು ಕಠಿನ ಪರಿಶ್ರಮವನ್ನು ಮುಂದುವರಿಸುತ್ತೇವೆ ಎಂದು ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.