ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Team Udayavani, Jan 14, 2025, 12:52 AM IST
ಹೊಸದಿಲ್ಲಿ: ಬಾಹ್ಯಾಕಾಶದಲ್ಲಿ ಸಸ್ಯ ಬೆಳವಣಿಗೆ ಬಗ್ಗೆ ಅಧ್ಯಯನ ಕೈಗೊಂಡಿರುವ ಇಸ್ರೋ ಮತ್ತೂಂದು ಮೈಲುಗಲ್ಲು ದಾಟಿದೆ. ಮುಂಬಯಿಯ ಅಮಿಟಿ ವಿವಿ ಬಾಹ್ಯಾಕಾಶಕ್ಕೆ ಕಳುಹಿ ಸಿದ್ದ ಪಾಲಾಕ್ ಇದೀಗ ಚಿಗುರಿದೆ ಎಂದು ಇಸ್ರೋ ತಿಳಿಸಿದೆ. ಪೊಒಇಎಂ-4 ನೌಕೆಯಲ್ಲಿ ಕಳುಹಿಸಿದ್ದ ಅಲಸಂಡೆಯೂ ಎಲೆ ಬಿಟ್ಟಿತ್ತು. ಆದರೆ ಬೀಜಮೊಳೆಯುವುದಕ್ಕಿಂತಲೂ ಸೊಪ್ಪು ಬೆಳೆಯುವುದು ಕಷ್ಟಕರ. ಅದಾಗ್ಯೂ ಪಾಲಾಕ್ ಚಿಗುರಿರುವುದು ಸಂತಸ ನೀಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.