Advertisement
ಗುರುವಾರ ಬೆಳಿಗ್ಗೆ ನಾಲ್ವರು ಅಪರಾಧಿಗಳಲ್ಲಿ ಮೂವರು ಸುಪ್ರೀಂ ಕೋರ್ಟ್ ಕದ ತಟ್ಟಿ ತಮ್ಮ ಗಲ್ಲು ಶಿಕ್ಷೆಗೆ ತಡೆ ತರಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆ ಬಳಿಕ ನಾಲ್ವರೂ ಅಪರಾಧಿಗಳ ಪರ ಅವರ ವಕೀಲರು ದೆಹಲಿ ಹೈಕೋರ್ಟಿನಲ್ಲಿ ಹೊಸ ಮನವಿ ಅರ್ಜಿಯನ್ನು ಸಲ್ಲಿಸಿ ಗಲ್ಲು ಶಿಕ್ಷೆಗೆ ತಡೆ ನೀಡಬೇಕೆಂದು ಕೋರಿಕೊಂಡರು. ಆದರೆ ಅಲ್ಲಿಯೂ ನಿರ್ಭಯಾ ಹಂತಕರ ಮನವಿಗೆ ಪುರಸ್ಕಾರ ಲಭಿಸಲಿಲ್ಲ.
ಬಳಿಕ 1.00 ಗಂಟೆ ಸುಮಾರಿಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮನೆಗೆ ತೆರಳಿದ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಅವರ ಮನೆಗೆ ತೆರಳಿ ತುರ್ತು ವಿಚಾರಣೆಗೆ ಮನವಿಯನ್ನು ಸಲ್ಲಿಸಿದರು.
Related Articles
Advertisement
ನ್ಯಾಯಮೂರ್ತಿ ಭೂಷಣ್ ಹಾಗೂ ನ್ಯಾಯಮೂರ್ತಿ ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ.