Advertisement

ಕೊನೇ ಕ್ಷಣದಲ್ಲಿ ಮರಣದಂಡನೆ ಶಿಕ್ಷೆ ತಪ್ಪಿಸುವ ಪ್ರಯತ್ನ ವಿಫಲ ; 5.30ಕ್ಕೆ ಗಲ್ಲು ಪಕ್ಕಾ

10:00 AM Mar 20, 2020 | Hari Prasad |

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಇಂದು ಬೆಳಗ್ಗಿನ ಜಾವ 5.30ಕ್ಕೆ ಗಲ್ಲು ಶಿಕ್ಷೆ ನಿಗದಿಯಾಗಿರುವಂತೆ ಇತ್ತ, ರಾಷ್ಟ್ರಪತಿಗಳು ಪವನ್ ಗುಪ್ತಾನ ಕ್ಷಮಾದಾನ ಅರ್ಜಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಆತನ ಪರ ವಕೀಲರು ಸುಪ್ರಿಂ ಕೋರ್ಟ್ ನಲ್ಲಿ ರಾತ್ರೋ ರಾತ್ರಿ ಅರ್ಜಿಯನ್ನು ಸಲ್ಲಿಸಿದ್ದರು.

Advertisement

ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಭಾನುಮತಿ, ನ್ಯಾಯಮೂರ್ತಿ ಭೂಷಣ್ ಹಾಗೂ ನ್ಯಾಯಮೂರ್ತಿ ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠ ನಡೆಸಿತು.

ಅಪರಾಧಿಗಳ ಪರ ವಕೀಲರ ವಾದವನ್ನು ಆಲಿಸಿದ ತ್ರಿಸದಸ್ಯ ಪೀಠ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ಮತ್ತು ಈ ಮೂಲಕ ಎಂಟು ವರ್ಷಗಳಷ್ಟು ಹಳೆಯ ಪ್ರಕರಣಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಲಭಿಸಿದಂತಾಗಿದೆ. ಮತ್ತು 23 ವರ್ಷದ ಅರೆ ವೈದ್ಯಕೀಯ ಪದವಿ ವಿದ್ಯಾರ್ಥಿನಿ ‘ನಿರ್ಭಯಾ’ ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳಿಗೆ ಬೆಳಿಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಗಿದೆ.

ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಭೂಷಣ್ ಅವರು, ‘ನೀವು ಈ ದಾಖಲೆಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆಯೂ ಸಲ್ಲಿಸಿದ್ದೀರಿ ಮತ್ತು ಹೈಕೋರ್ಟ್ ಹಾಗೂ ಎಸ್.ಎಲ್.ಪಿ. ಮುಂದೆಯೂ ಈಗಾಗಲೇ ಸಲ್ಲಿಸಿದ್ದೀರಿ. ಇದೊಂದೇ ವಿಷಯದ ಆಧಾರದಲ್ಲಿ ನೀವು ಮತ್ತೆ ಮತ್ತೆ ನ್ಯಾಯಾಲಯದಲ್ಲಿ ವಾದ ಮಾಡಲು ಸಾಧ್ಯವೇ. ನೀವು ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಬಲವಂತ ಮಾಡುತ್ತಿದ್ದೀರಿ’ ಎಂದು ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್ ಅವರನ್ನು ಪ್ರಶ್ನಿಸಿದರು.

‘ಈಗಾಗಲೇ ಅಂತಿಮಗೊಂಡಿರುವ ವಿಚಾರವನ್ನು ಮತ್ತೆ ಪುನರ್ ತೆರೆಯಲು ಸಾಧ್ಯವಿಲ್ಲ. ಆರ್ಟಿಕಲ್ 32 ಅಡಿಯಲ್ಲಿ ನಾವು ಇದನ್ನು ಪುನರ್ ಪರಿಶೀಲಿಸುವಂತಿಲ್ಲ. ನೀವು ಸಲ್ಲಿಸಿರುವ ಬಾಲಾಪರಾಧ ನೆಲೆಯ ತಕರಾರು ರಾಷ್ಟ್ರಪತಿಗಳ ಕ್ಷಮಾದಾನ ತಿರಸ್ಕಾರ ಅರ್ಜಿಯನ್ನು ಪ್ರಶ್ನಿಸಲು ನೆಲೆಯಾಗಲು ಹೇಗೆ ಸಾಧ್ಯ?’ ಎಂದು ನ್ಯಾಯಮೂರ್ತಿಗಳು ಎ.ಪಿ.ಸಿಂಗ್ ಅವರನ್ನು ಪ್ರಶ್ನಿಸಿದರು.

Advertisement

ಪವನ್ ಗುಪ್ತಾನ ವಯಸ್ಸಿನ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದರು ಹಾಗೂ ವರದಿಗಳಲ್ಲಿ ಸೇರಿಸದೆ ಅದನ್ನು ಮುಚ್ಚಿಟ್ಟಿದ್ದಾರೆ. ಮತ್ತು ವಿಚಾರಣಾ ನ್ಯಾಯಾಲಯದ ಈ ತಪ್ಪು ಕ್ರಮವನ್ನು ಪ್ರಶ್ನಿಸಿ ಅಕ್ಷಯ್ ಪರವಾಗಿ ನಾನು ಈಗಾಗಲೇ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದೇನೆ. ಹೀಗೆ ಸರ್ವೋಚ್ಛ ನ್ಯಾಯಾಲದಲ್ಲಿ ಈ ಅರ್ಜಿಯ ವಿಚಾರಣೆ ಬಾಕಿ ಇರುತ್ತಾ ಪಟಿಯಾಲಾ ಕೋರ್ಟ್ ನನ್ನ ಮನವಿಯನ್ನು ತಿರಸ್ಕರಿಸಲು ಹೇಗೆ ಸಾಧ್ಯ ಎಂದು ಅಪರಾಧಿಗಳ ಪರ ಎಪಿ ಸಿಂಗ್ ನ್ಯಾಯಾಲಯದ ಮುಂದೆ ಪ್ರಶ್ನಿಸಿದರು.

ವಾದ ಮಂಡಿಸಿದ ಅಪರಾಧಿಗಳ ಪರ ಇನ್ನೊಬ್ಬ ವಕೀಲ ಖ್ವಝಾ ಅವರು. ಪವನ್ ಗುಪ್ತಾನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ಮುಕ್ತ ಮನಸ್ಸಿನಿಂದ ತಿರಸ್ಕಾರ ಮಾಡಿಲ್ಲ ಎಂದು ನ್ಯಾಯಪೀಠದ ಮುಂದೆ ವಾದಿಸಿದರು.

ಕೋವಿಡ್ 19 ವೈರಸ್ ಮುಂಜಾಗರೂಕತಾ ಕ್ರಮವಾಗಿ ನಿರ್ಭಯಾ ಪೋಷಕರನ್ನು ಸುಪ್ರಿಂ ಕೋರ್ಟ್ ಆವರಣದೊಳಗೆ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next