Advertisement
ನಿರ್ಭಯಾ ನಿಧಿ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತುಬೆಂಗಳೂರು ನಗರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಕಳೆದ ಫೆಬ್ರವರಿ ಮೆಜೆಸ್ಟಿಕ್‌ನಲ್ಲಿ ನಿರ್ಭಯ ಕೇಂದ್ರ ಸಖಿ ಒನ್ ಸ್ಟಾಪ್ ಸೆಂಟರ್ ಸ್ಥಾಪಿಸಲಾಗಿದ್ದು, ನಿತ್ಯ ಎರಡರಿಂದ ಐದು ಪ್ರಕರಣಗಳು ದಾಖಲಾಗುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಸಖಿ ಒನ್‌ಸ್ಟಾಪ್ ಈ ಹಿಂದೆ 2019ರಲ್ಲಿ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿದೆ.
Related Articles
Advertisement
ನಿರ್ಭಯ ಕೇಂದ್ರದ ಕಾರ್ಯ ನಿರ್ವಹಣೆ : ಎಫ್ಐಆರ್ ದಾಖಲಾಗುವ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹಿಳೆಯರನ್ನು ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ತನಿಖೆ ಮಾಡಬೇಕೆಂಬ ನಿಮಯವಿದೆ. ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಇಲ್ಲದಿದ್ದರೆ, ಅಂತಹ ಪೊಲೀಸ್ ಠಾಣೆಗಳು ನಿರ್ಭಯ ಕೇಂದ್ರಕ್ಕೆ ಕಳುಹಿಸುತ್ತಿವೆ.
ಆಗ ನಿರ್ಭಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಈ ಕೇಂದ್ರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಸಮ್ಮುಖದಲ್ಲಿ ಹೇಳಿಕೆ ನೀಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿಧಿವಿಜ್ಞಾನ ವೈದ್ಯಕೀಯ ಪರೀಕ್ಷೆ ಹಾಗೂ ಪ್ರಾಥಮಿಕ ಚಿಕಿತ್ಸೆ ವ್ಯವಸ್ಥೆಯೂ ಇಲ್ಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಈ ಕೇಂದ್ರ ಆರಂಭ ವಾಗಿದ್ದು, ಮಹಿಳೆಯರಿಗೆ ಮತ್ತು ಮಕ್ಕಳ ಪ್ರಕರಣಗಳಿಗೆ ತುಂಬಾ ಸಹಾಯಕವಾಗಿದೆ. ಸದ್ಯದಲ್ಲಿ ಎಫ್ಐಆರ್ ತನಿಖೆ, ನ್ಯಾಯಾಲಯ ವಿಷಯಗಳು ಮತ್ತು ಲೈಂಗಿಕ ಕಿರು ಕುಳ ಪ್ರಕರಣಗಳು ವಿಚಾರಣೆಯಲ್ಲಿ ನೆರವಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ಪ್ರಕರಣಗಳಿಗೆ ಸಂಬಂಧಿಸಿ ಕಾರ್ಯ ನಿರ್ವಹಿಸಲು ಚಿಂತನೆ ನಡೆದಿದೆ. –ಲಕ್ಷ್ಮೀ ಮೆಂಡಿಗೇರಿ,ಮಹಿಳಾ ಸಬ್‌ಇನ್‌ಸ್ಪೆಕ್ಟರ್
–ಭಾರತಿ ಸಜ್ಜನ್