Advertisement

ನೀರವ್ ಮೋದಿಗೆ ಸೇರಿದ 637 ಕೋಟಿ ಮೌಲ್ಯದ ಆಸ್ತಿ, ಪಾಸ್ತಿ ಇಡಿ ವಶಕ್ಕೆ

02:16 PM Oct 01, 2018 | Team Udayavani |

ನವದೆಹಲಿ: ವಿಶ್ವಪ್ರಸಿದ್ಧ ಆಭರಣ ವಿನ್ಯಾಸಕ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಬಹುಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿಗೆ ಸೇರಿದ ದೇಶ, ವಿದೇಶಗಳು ಒಟ್ಟು 637 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

Advertisement

ಭಾರತ, ಯುಕೆ , ನ್ಯೂಯಾರ್ಕ್ ಸೇರಿದಂತೆ ನಾಲ್ಕು ದೇಶಗಳಲ್ಲಿ ಇರುವ ಐಶಾರಾಮಿ ಅಪಾರ್ಟ್ ಮೆಂಟ್ಸ್, ಬೆಲೆಬಾಳುವ ಚಿನ್ನಾಭರಣ, ಬ್ಯಾಂಕ್ ಖಾತೆಗಳನ್ನು ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ರಾಜ್ಯ ಸ್ವಾಮ್ಯದ ಪಿಎನ್ ಬಿ(ಪಂಜಾಬ್ ನ್ಯಾಶನಲ್ ಬ್ಯಾಂಕ್) ಬ್ಯಾಂಕ್ ನಲ್ಲಿ ನಕಲಿ ಗ್ಯಾರಂಟಿ ನೀಡಿ ಬರೋಬ್ಬರಿ 13 ಸಾವಿರ ಕೋಟಿ ರೂಪಾಯಿಯಷ್ಟು ಭಾರೀ ಮೊತ್ತದ ಹಣವನ್ನು ನೀರವ್ ಮೋದಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ, ಈತ ಯುಕೆಯಲ್ಲಿ ವಾಸ್ತವ್ಯ ಹೂಡಿರಬೇಕೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next