ಲಂಡನ್ : ನೀರವ್ ಮೋದಿಯ ಜಾಮೀನು ಕೋರಿಕೆ ಅರ್ಜಿಯನ್ನು ಲಂಡನ್ ಕೋರ್ಟ್ ಶುಕ್ರವಾರ ತಳ್ಳಿ ಹಾಕಿದೆ. ಇದರಿಂದಾಗಿ ಎಪ್ರಿಲ್ 26 ರ ವರೆಗೆ ಜೈಲಿನಲ್ಲೆ ಕಾಲ ಕಳೆಯ ಬೇಕಾಗಿದೆ.
ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಎಪ್ರಿಲ್ 26 ಕ್ಕೆ ಮುಂದೂಡಿದೆ.
ನೀರವ್ ಮೋದಿ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆಗೈದು, ವಿದೇಶಕ್ಕೆ ಪಲಾಯನ ಗೈದು, ಪ್ರಕೃತ ಲಂಡನ್‌ನಿಂದ ಭಾರತಕ್ಕೆ ಗಡೀಪಾರಾಗುವ ಹಂತದಲ್ಲಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ, ಘೋಷಿತ ಆರ್ಥಿಕ ಅಪರಾಧಿಯಾಗಿದ್ದಾರೆ.
ಗಡೀಪಾರು ಪ್ರಕ್ರಿಯೆಗೆ ಲಂಡನ್ ಅಧಿಕಾರಿಗಳಿಗೆ ನೆರವಾಗುವುದಕ್ಕಾಗಿ ಸಿಬಿಐ ತಂಡವೊಂದು ಲಂಡನ್‌ಗೆ ಪ್ರಯಾಣಿಸಲಿದೆ.
ಜಂಟಿ ನಿರ್ದೇಶಕರ ಮಟ್ಟದ ಸಿಬಿಐ ಅಧಿಕಾರಿಯೋರ್ವರಿಗೆ ಸಂಬಂಧಿತ ದಾಖಲೆ ಪತ್ರಗಳೊಂದಿಗೆ ಲಂಡನ್ ಗೆ ತೆರಳಿದ್ದಾರೆ.