Advertisement

ನೀರವ್‌ಗೆ ಲ್ಯಾಪ್‌ಟಾಪ್‌ ಬೇಕಂತೆ!

01:05 AM Jun 29, 2019 | mahesh |

ಲಂಡನ್‌: ‘ಭಾರತ ಸರ್ಕಾರವು 5 ಸಾವಿರ ಪುಟಗಳ ಸಾಕ್ಷ್ಯವನ್ನು ನೀಡಿದೆ. ಅದನ್ನು ಓದುವುದಕ್ಕಾಗಿ ಒಂದು ಲ್ಯಾಪ್‌ಟಾಪ್‌ ಬೇಕು’ ಎಂದು ಉದ್ಯಮಿ ನೀರವ್‌ ಮೋದಿ ಲಂಡನ್‌ ನ್ಯಾಯಾಲಯಕ್ಕೆ ಆಗ್ರಹಿಸಿದ್ದಾರೆ. ಗುರುವಾರ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ನೀರವ್‌ ಪರ ವಕೀಲರು ಈ ಬೇಡಿಕೆ ಸಲ್ಲಿಸಿದ್ದಾರೆ. ವಿಚಾರಣೆಗೆ ವೀಡಿಯೋ ಲಿಂಕ್‌ ಮೂಲಕ ವ್ಯಾಂಡ್ಸ್‌ವರ್ತ್‌ ಜೈಲಿನಿಂದಲೇ ಹಾಜರಾದ ನೀರವ್‌, ಆತ್ಮವಿಶ್ವಾಸದಿಂದಲೇ ತನ್ನ ಹೆಸರು ಮತ್ತು ಜನ್ಮ ದಿನಾಂಕವನ್ನು ಹೇಳಿದ್ದಾನೆ.

Advertisement

ಜೈಲಿನಲ್ಲಿ 5 ಸಾವಿರ ಪುಟಗಳನ್ನು ನೀರವ್‌ ನೋಡಿ, ಪ್ರಕರಣಕ್ಕೆ ಸಂಬಂಧಿಸಿ ವಕೀಲರಿಗೆ ಸೂಚನೆ ನೀಡಲು ಅನುಕೂಲವಾಗುವಂತೆ ಲ್ಯಾಪ್‌ಟಾಪ್‌ ಒದಗಿಸಬೇಕು ಎಂದು ನೀರವ್‌ ಪರ ನ್ಯಾಯವಾದಿ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌ ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next