Advertisement

ನೀರವ್‌ ಜಾಮೀನಿಗಾಗಿ ಸಾಕುನಾಯಿ ನೆಪ!

01:08 AM Mar 31, 2019 | Team Udayavani |

ಲಂಡನ್‌: ವಜ್ರ ವ್ಯಾಪಾರಿ ನೀರವ್‌ ಮೋದಿ ಜಾಮೀನು ಅರ್ಜಿ ವಿಚಾರಣೆ ವೇಳೆ ಶುಕ್ರವಾರ, ನೀರವ್‌ ಪರ ವಕೀಲರಾದ ಕ್ಲೇರ್‌ ಮೊಂಟೊಮೆರಿ ಅವರು ಜಾಮೀನಿಗಾಗಿ ಹರಸಾಹಸ ಮಾಡಿದ್ದು, ತಮ್ಮ ವಾದ ಸಮರ್ಥನೆಗೆ ನೀರವ್‌ ಮನೆಯ ಸಾಕು ನಾಯಿಯನ್ನೂ ಎಳೆದು ತಂದಿರುವುದು ಸುದ್ದಿಯಾಗಿದೆ.

Advertisement

ಜಾಮೀನು ಸಿಕ್ಕರೆ, ನೀರವ್‌ ಪರಾರಿ ಯಾಗುವ, ಸಾಕ್ಷಿಗಳನ್ನು ಬೆದರಿಸುವ ಕೆಲಸ ಮಾಡುತ್ತಾರೆಂಬ ವಾದ ಮಂಡಿಸಿದ್ದರಿಂದ, ಅದನ್ನು ಅಲ್ಲಗಳೆಯಲು ಹತ್ತಾರು ಕಾರಣಗಳನ್ನು ಕ್ಲೇರ್‌ ಮಂಡಿಸಿದರು. “ನೀರವ್‌ ಪುತ್ರ ಉನ್ನತ ವ್ಯಾಸಂಗದಲ್ಲಿದ್ದು ಆತನನ್ನು ನೋಡಿಕೊಳ್ಳಲು ಮೋದಿ ಮನೆಯಲ್ಲಿರಲೇಬೇಕು. ತಮಗೆ ವಯಸ್ಸಾದ ಕಾರಣಕ್ಕಾಗಿ ಒಂದು ಸಾಕು ನಾಯಿಯನ್ನೂ ಅವರು ಸಾಕಿದ್ದಾರೆ. ಅದರ ಜವಾಬ್ದಾರಿಯೂ ಅವರ ಮೇಲಿದೆ. ಹಾಗಿರುವಾಗ, ಅವರು ದೇಶ ಬಿಟ್ಟು ಪರಾರಿಯಾಗುವ ಮಾತೇ ಇಲ್ಲ. ಹಾಗಾಗಿ, ಅವರಿಗೆ ಜಾಮೀನು ನೀಡಿ ಎಂದು ವಾದಿಸಿದರು. ಆದರೆ, ಅವರ ವಾದಕ್ಕೆ ನ್ಯಾಯಮೂರ್ತಿ ಮಾನ್ಯತೆ ನೀಡಲಿಲ್ಲ.

ನೀರವ್‌, ಮಲ್ಯ ಒಂದೇ ಸೆಲ್‌ನಲ್ಲಿ?: ವಿಚಾರಣೆ ವೇಳೆ ಕೆಲವಾರು ತಮಾಷೆ ಪ್ರಸಂಗಗಳೂ ನಡೆದವು. ನ್ಯಾ| ಎಮ್ಮಾ ಅಬುìತೊ°àಟ್‌ ಅವರು, ನೀರವ್‌ ಜತೆಗೆ ಮಲ್ಯ ಅವರೂ ಭಾರತಕ್ಕೆ ಹಸ್ತಾಂತರ ಗೊಳ್ಳುವುದು ಖಾತ್ರಿಯಾದರೆ ಈ ಇಬ್ಬರನ್ನೂ ಎಲ್ಲಿ ಇರಿಸುತ್ತೀರಿ ಎಂದು ಭಾರತದ ಪರ ವಾದ ಮಂಡಿಸಿದ್ದ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಕೀಲರು, ಈಗಾಗಲೇ ಮಲ್ಯರಿಗಾಗಿ ಮುಂಬೈನ ಆರ್ಥರ್‌ ರಸ್ತೆಯ ಜೈಲಿನ ವಿಶೇಷ ಸೆಲ್‌ನಲ್ಲೇ ಇರಿಸಬಹುದು ಎಂದರು.

ಇದಕ್ಕೆ ನಸುನಕ್ಕ ನ್ಯಾಯಮೂರ್ತಿ, “”ಮಲ್ಯಗಾಗಿ ಸಿದ್ಧವಾ ಗುತ್ತಿರುವ ಸೆಲ್‌ ವಿಶಾಲವಾಗಿದೆ. ನೀರವ್‌ರನ್ನೂ ಅದೇ ಸೆಲ್‌ನಲ್ಲಿ ಇಟ್ಟುಬಿಡಿ” ಎಂದರು. ಆಗ, ನ್ಯಾಯಾಲಯದಲ್ಲಿ ನಗೆಯ ಬುಗ್ಗೆ ಉಕ್ಕಿತು.

Advertisement

Udayavani is now on Telegram. Click here to join our channel and stay updated with the latest news.

Next