Advertisement

ನೀರಾ ಕುಡಿದ ಸಿದ್ದರಾಮಯ್ಯ, ಶಾಸಕರು

10:18 PM Mar 05, 2020 | Team Udayavani |

ವಿಧಾನಸೌಧದಲ್ಲಿ ಬಜೆಟ್‌ ಮಂಡನೆ ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಬಹುತೇಕ ಶಾಸಕರು ವಿಧಾನಸೌಧದ ಮೊಗಸಾಲೆಯಲ್ಲಿ ನೀರಾ ಕುಡಿದು ಖುಷಿ ಪಟ್ಟರು. ಖಾಸಗಿ ಸಂಸ್ಥೆಯೊಂದು ತಯಾರಿಸಿದ್ದ ನೀರಾ ತಂಪು ಪಾನೀಯವನ್ನು ಮಾಜಿ ಶಾಸಕ ಮನೋಹರ್‌ ಮಸ್ಕಿ ಎಲ್ಲಾ ಶಾಸಕರಿಗೂ ನೀರಾ ಬಾಟಲ್‌ ನೀಡಿ ಕುಡಿದು ನೋಡುವಂತೆ ಮನವೊಲಿಕೆ ಮಾಡುತ್ತಿದ್ದರು.

Advertisement

ಕೆಲವು ಶಾಸಕರಿಗೆ ನೀರಾ ಬಗ್ಗೆ ಅನುಮಾನ ಇದ್ದರಿಂದ ಕುಡಿಯಲು ಹಿಂದೇಟು ಹಾಕುತ್ತಿದ್ದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಆಡಳಿತ ಹಾಗೂ ಪ್ರತಿಪಕ್ಷದ ಬಹುತೇಕ ಶಾಸಕರಿಗೆ ಅವರೇ ನೀರಾ ಕುಡಿಯುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಕೆಲವು ಶಾಸಕರು ಬಾಟಲ್‌ಗ‌ಳನ್ನು ಎತ್ತಿ ಕುಡಿದು ಅದರ ಟೇಸ್ಟ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಅನುಮಾನದಿಂದಲೇ ಬಾಟಲ್‌ ಕೈಗೆತ್ತಿಕೊಂಡು ನೀರಾ ಕುಡಿದರು. ಅಲ್ಲದೇ ನಾನೇ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೆ. ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಪೂರ್ಣ ಬಾಟಲ್‌ ಕುಡಿದು ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next