Advertisement

ನೀರಾ, ತೆಂಗು ಉತ್ಪನ್ನ  ಪ್ರೋತ್ಸಾಹಕ್ಕೆ 3 ಕೋ.ರೂ. 

08:51 AM Mar 31, 2017 | |

ಉಡುಪಿ: ತೆಂಗು ಬೆಳೆಗಾರರ ರಕ್ಷಣೆಗಾಗಿ ತೋಟಗಾರಿಕೆ ಇಲಾಖೆ ನೀರಾ ನೀತಿಯನ್ನು ಜಾರಿಗೆ ತಂದಿದ್ದು, ನೀರಾ ಉತ್ಪಾದನೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತೇಜನ ಕೊಡುವುದಕ್ಕಾಗಿ 3 ಕೋ. ರೂ. ಅನುದಾನ ಒದಗಿಸಲಾಗಿದೆ ಎಂದು ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಶ್ನೆಗೆ ಲಿಖೀತ ಉತ್ತರ ನೀಡಿದರು.

Advertisement

 ಕರ್ನಾಟಕ ಅಬಕಾರಿ (ನೀರಾ) ನಿಯಮವನ್ನು ಅಬಕಾರಿ ಇಲಾಖೆ ಸಿದ್ಧ ಪಡಿಸಿದ್ದು, ನೀರಾವನ್ನು ಪುಷ್ಟಿದಾಯಕ ಪೇಯವನ್ನಾಗಿ ಇಳಿಸಲು ಹಾಗೂ ಇದನ್ನುಇತರ ಉದ್ದೇಶಕ್ಕೆ ಬಳಸುವುದಕ್ಕೆ ಸಂಸ್ಕರಿಸಲು ತೆಂಗು ಉತ್ಪಾದನಾ ಕಂಪೆನಿಗಳಿಗೆ ಲೈಸನ್ಸ್‌ ನೀಡಿ ಮಾರುಕಟ್ಟೆ ಹಾಗೂ ಇತರ ಸೌಲಭ್ಯ ಕಲ್ಪಿಸಲು 3 ಕೋ.ರೂ. ಅನುದಾನ ಕಾದಿರಿಸಲಾಗಿದೆ. ತೆಂಗು ಅಭಿವೃದ್ಧಿ ಮಂಡಳಿಯಿಂದ ಟೆಕ್ನಾಲಜಿ ಮಿಷನ್‌ ಆನ್‌ ಕೋಕನೆಟ್‌ ಕಾರ್ಯಕ್ರಮದಲ್ಲಿ ನೀರಾ ಒಳಗೊಂ ಡಂತೆ ತೆಂಗು ಉತ್ಪನ್ನಗಳನ್ನು ಉತ್ಪಾದಿಸಲು ಮುಂದೆ ಬರುವ ಉದ್ಯಮಿಗಳಿಗೆ ಒಟ್ಟು ಘಟಕ ವೆಚ್ಚಕ್ಕೆ ಶೇ. 25ರಂತೆ ಗರಿಷ್ಠ 50 ಲ.ರೂ. ಮೊತ್ತದ ಸಹಾಯಧನ ನೀಡಲಾಗುತ್ತಿದೆ ಎಂದು  ಸಚಿವರು ಉತ್ತರಿಸಿದರು.

 ತೆಂಗು ಬೆಳೆಗಾರರ ಕಂಪೆನಿ, ಸೊಸೈಟಿ ಹಾಗೂ ಫೆಡರೇಶನ್‌ಗಳು ಹಾಗೂ ಅವುಗಳಿಗೆ ಪ್ರೋತ್ಸಾಹ ನೀಡಿ ತೆಂಗು ಬೆಳೆಗಾರರ ಹಿತಕಾಪಾಡಲು ಹಾಗೂ ನೀರಾ ತೆಗೆದು ಬದುಕುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆಗೊಳಿಸಿ ಅವರಿಗೆ ಪಿಂಚಣಿ, ಇಎಸ್‌ಐ ಸೇರಿದಂತೆ ಕಾರ್ಮಿಕ ಇಲಾಖೆಯ ಸೌಲಭ್ಯ ಒದಗಿಸುವಂತೆ ಪೂಜಾರಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next