Advertisement

ಮಂಗಳೂರಿಗೂ ಕಾಲಿಟ್ಟ ನಿಪಾಹ್..ಇಬ್ಬರಲ್ಲಿ ಶಂಕಿತ ಸೋಂಕು ಪತ್ತೆ?

06:08 PM May 22, 2018 | Team Udayavani |

ಮಂಗಳೂರು:ಕೇರಳದಾದ್ಯಂತ ಜನತೆಯನ್ನು ಕಂಗೆಡಿಸಿರುವ ನಿಪಾಹ್ ವೈರಸ್ ಸೋಂಕು ಇದೀಗ ಮಂಗಳೂರಿಗೂ ಕಾಲಿಟ್ಟಿದ್ದು, ಇಬ್ಬರಲ್ಲಿ ಶಂಕಿತ ನಿಫಾ ಸೋಂಕು ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

Advertisement

ಮಾರಣಾಂತಿಕ ನಿಪಾಹ್ ವೈರಸ್ ಗೆ ಈಗಾಗಲೇ ಕೇರಳದಲ್ಲಿ 10 ಮಂದಿ ಬಲಿಯಾಗಿದ್ದಾರೆ. ಏತನ್ಮಧ್ಯೆ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡದಲ್ಲಿಯೂ ನಿಪಾಹ್ ಸದ್ದು ಮಾಡತೊಡಗಿರುವುದು ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಓರ್ವ ಕೇರಳ ಹಾಗೂ ಓರ್ವ ಮಂಗಳೂರು ಮೂಲದ ವ್ಯಕ್ತಿಯಲ್ಲಿ ಶಂಕಿತ ನಿಪಾಹ್ ಸೋಂಕು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಇಬ್ಬರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿ ಹೇಳಿದೆ.

ಕೇರಳದಿಂದ ಹೆಚ್ಚಿನ ಜನರು ಮಂಗಳೂರು, ಕೊಲ್ಲೂರು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.

ರೋಗದ ಗುಣ-ಲಕ್ಷಣಗಳೇನು?

Advertisement

ದೇಹಕ್ಕೆ ಪ್ರವೇಶಿಸಿದ 7-14 ದಿನಗಳಲ್ಲಿ ನಿಶ್ಚಲವಾಗಿರುವ ವೈರಸ್‌, ನಂತರ ವೇಗವಾಗಿ ಹರಡುತ್ತದೆ. ಮಿದುಳು ಊತ, ಹಠಾತ್‌ ಜ್ವರ, ಉಸಿರು ಕಡಿಮೆ ಯಾಗುವುದು, ರಕ್ತದೊತ್ತಡ ಕಡಿಮೆಯಾಗುವುದು, ತಲೆನೋವು, ಮಿದುಳಿನ ಉರಿಯೂತ, ಅಮಲು, ಶ್ವಾಸಕೋಶ ಸೋಂಕು ಮುಂತಾದ ಗುಣಲಕ್ಷಣ ಕಾಣಿಸಿಕೊಳ್ಳುತ್ತದೆ.

ವಿಶಿಷ್ಟ ಪ್ರಭೇದದ ವೈರಸ್‌

*ಪ್ಯಾರಾಮಿಕ್ಸೋವಿರಿಡೆ ಪ್ರಭೇದದ ವೈರಸ್‌

*ಭಾರತದಲ್ಲಿ ಹಲವು ಬಾರಿ ಕಾಣಿಸಿಕೊಂಡ ವೈರಸ್‌

* 1998ರಲ್ಲಿ ಮಲೇಷಿಯಾದಲ್ಲಿ ಮೊದಲಿಗೆ ಪತ್ತೆ

*2001ರಲ್ಲಿ ಬಾಂಗ್ಲಾದಲ್ಲಿ, ನಂತರ ಪಶ್ಚಿಮ

*ಬಂಗಾಳದ ಸಿಲಿಗುರಿಯಲ್ಲಿ ಕಾಣಿಸಿದ ವೈರಸ್‌

Advertisement

Udayavani is now on Telegram. Click here to join our channel and stay updated with the latest news.

Next