Advertisement
ಮಂಗಳೂರಿನ ತಲಪಾಡಿ, ಸುಳ್ಯ ತಾಲೂಕಿನ ಮೂರೂರು ಜಾಲೂÕರು, ಬಡ್ಡಡ್ಕ, ಕನ್ನಡಿತೋಡು, ಪುತ್ತೂರು ತಾಲೂಕಿನ ಸ್ವರ್ಗ, ಮೆನಾಲ, ಸುಳ್ಯಪದವು, ಬಂಟ್ವಾಳ ತಾಲೂಕಿನ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೆರಿಪದವಿನಲ್ಲಿ ತಪಾಸಣೆ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ಸಿಬಂದಿ ಕೇರಳ ಭಾಗಗಳಲ್ಲಿ ವಡಕ್ಕರ, ಕಲ್ಲಿಕೋಟೆ ನೋಂದಣಿಯ ವಾಹನಗಳಲ್ಲಿ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಅವರಲ್ಲಿ ಜ್ವರದ ಲಕ್ಷಣ ಇದೆಯೇ ಎಂದು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಸದ್ಯ ಯಾವುದೇ ರೀತಿಯ ಜ್ವರದ ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಡ್ ಸನ್ನದ್ಧ
ಕೇರಳದಲ್ಲಿ ನಿಫಾ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಒಂದು ವೇಳೆ ಜಿಲ್ಲೆಯಲ್ಲಿ ಅಂತಹ ರೋಗ ಲಕ್ಷಣ ಪತ್ತೆಯಾದರೆ ಅವರ ಚಿಕಿತ್ಸೆಗಾಗಿ ವೆನಾÉಕ್ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ಕೊಠಡಿ (ಐಸೊಲೇಶನ್ ವಾರ್ಡ್)ಯನ್ನು ಸನ್ನದ್ಧವಾಗಿಡಲಾಗಿದೆ. ಅರಂತೋಡು: ಸಂಪಾಜೆ ಅರಣ್ಯ ತಪಾಸಣೆ ಚೆಕ್‌ಪೋಸ್ಟ್ ನಲ್ಲಿ ಕೇರಳ ರಾಜ್ಯದಿಂದ ಬರುವ ವಾಹನಗಳು ನಿಲ್ಲಿಸಿ ಪ್ರಯಾಣಿಕರ ತಪಾಸಣೆ ಆರಂಭಿಸಲಾಗಿದೆ.
Related Articles
Advertisement
ತಲಪಾಡಿಯಲ್ಲಿ ಚೆಕ್ ಪಾಯಿಂಟ್ಉಳ್ಳಾಲ: ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸಿ ಪ್ರಮುಖ ಗಡಿಪ್ರದೇಶವಾದ ರಾ.ಹೆ. 66ರ ತಲಪಾಡಿಯಲ್ಲಿ ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿ ನೇತೃತ್ವದಲ್ಲಿ (ರ್‍ಯಾಂಡಂ ಫೀವರ್ ಸರ್ವೇ) ತಪಾಸಣೆ ಆರಂಭಿಸಲಾಗಿದೆ. ಶನಿವಾರ ಕೇರಳದ ಕೋಯಿಕ್ಕೋಡ್ ಮತ್ತು ವಡಗರ ಜಿಲ್ಲೆಗಳಿಂದ ಬಂದ ಸುಮಾರು 70 ವಾಹನಗಳ ಪ್ರಯಾಣಿಕರನ್ನು ತಲಪಾಡಿಯಲ್ಲಿರುವ ಕಿಯೋಸ್ಕ್ ನಲ್ಲಿ ತಪಾಸಣೆಗೆ ಒಳಪಡಿಸಿ ಅವರ ದೂರವಾಣಿ ಸಂಖ್ಯೆಯನ್ನು ಪಡೆದು ಪ್ರಯಾಣ ಮುಂದುವರಿಸಲು ಅವಕಾಶ ಮಾಡಲಾಯಿತು.