Advertisement

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

11:09 PM Sep 24, 2023 | Team Udayavani |

ಮಂಗಳೂರು: ಕೇರಳದಲ್ಲಿ ನಿಫಾ ದೃಢಪಟ್ಟ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕ್ರೀನಿಂಗ್‌ ಮುಂದುವರಿಸಲಾಗಿದೆ. ಸದ್ಯ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಈ ವರೆಗೆ ಕೇರಳದಿಂದ ಆಗಮಿಸಿದ ಯಾರಿಗೂ ಜ್ವರ ಅಥವಾ ನಿಫಾ ಲಕ್ಷಣ ಕಂಡುಬಂದಿಲ್ಲ.

Advertisement

ಕೇರಳದಲ್ಲಿ ಸದ್ಯ ಯಾವುದೇ ಹೊಸ ನಿಫಾ ಪ್ರಕರಣಗಳು ಕಂಡುಬಾರದಿರುವ ಹಿನ್ನೆಲೆಯಲ್ಲಿ ಗಾಬರಿಪಡುವ ಅವಶ್ಯಕತೆಯಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಮುನ್ನೆಚ್ಚರಿಕೆ ಉದ್ದೇಶದಿಂದ ಇನ್ನೂ ಎರಡು ವಾರಗಳ ಕಾಲ ದ.ಕ. ಜಿಲ್ಲೆಯನ್ನು ಸಂಪರ್ಕಿಸುವ ಕೇರಳ ಗಡಿ ಭಾಗದಲ್ಲಿ ತಪಾಸಣೆ ಮುಂದುವರಿಸಲು ನಿರ್ಧರಿಸಲಾಗಿದೆ.

ಜಿಲ್ಲೆಯ ಗಡಿಭಾಗಗಳಾದ ತಲಪಾಡಿ, ಮೂರೂರು, ಜಾಲೂÕರು, ಬಡ್ಡಡ್ಕ, ಕನ್ನಡಿತೋಡು, ಸ್ವರ್ಗ, ಮೆನಾಲ, ಸುಳ್ಯಪದವು, ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೆರಿಪದವಿನಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಜ್ವರ ಸಮೀಕ್ಷೆ ನಡೆಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next