Advertisement

26ರ ವಯಸ್ಸಿಗೆ ಸ್ವಿಮ್ಮಿಂಗ್‌ಗೆ ನಿಂಗ್‌ ವಿದಾಯ

12:55 AM Mar 07, 2019 | |

ಶಾಂಘೈ: ಮಾಜಿ 100 ಮೀ. ಫ್ರೀಸ್ಟೈಲ್‌ ವಿಶ್ವ ಚಾಂಪಿಯನ್‌ ಮತ್ತು ಸ್ವಿಮ್ಮಿಂಗ್‌ ಪಿನ್‌-ಅಪ್‌, ಚೀನದ ನಿಂಗ್‌ ಝೆಟೋ ತಮ್ಮ 26ನೇ ವಯಸ್ಸಿನ ಹುಟ್ಟಹಬ್ಬದ ದಿನವೇ ಕ್ರೀಡೆಗೆ ವಿದಾಯ ಹೇಳಿದ್ದಾರೆ.

Advertisement

ಸಾಮರ್ಥ್ಯ ಮತ್ತು ತನ್ನ ಸೌಂದರ್ಯದಿಂದ ಚೀನದಲ್ಲಿ ನೆಚ್ಚಿನ ಕ್ರೀಡಾಪಟು ಎಂದು ಕರೆಸಿಕೊಂಡಿರುವ ನಿಂಗ್‌ 2015ರಲ್ಲಿ 100 ಮೀ. ಫ್ರೀಸ್ಟೈಲ್‌ ವಿಶ್ವ ಪ್ರಶಸ್ತಿ ಹಾಗೂ ಏಶ್ಯನ್‌ ಗೇಮ್ಸ್‌ನಲ್ಲಿ 4 ಬಾರಿ ಚಿನ್ನದ ಪದಕ ಜಯಿಸಿದ್ದಾರೆ. ಅವರ ವೃತ್ತಿಜೀವನದಲ್ಲಿ ಯಾವುದೇ ಏರಿಕೆಯಾಗದ ಕಾರಣ ಕ್ರೀಡೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

2011ರಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಅನುತೀರ್ಣರಾದ ನಿಂಗ್‌ ಟ್ವೀಟರ್‌ ಮೂಲಕ ವಿದಾಯ ಹೇಳಿದ್ದಾರೆ. ಇದಾದ ಬಳಿಕದಿಂದ ಅವರ ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿದಾಯ ತಿಳಿಸಿ ಪ್ರತಿಭೆ ತಕ್ಕ ಅವಕಾಶ ದೊರಕಿಲ್ಲ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ.

ಪ್ರಾಯೋಜಕತ್ವ ವಿಷಯದಲ್ಲಿ ನಿಯಮವನ್ನು ಉಲ್ಲಂ ಸಿದರು ಎಂಬ ಕಾರಣ 2017ರ ಫೆಬ್ರವರಿಯಿಂದ ಚೀನ ತಂಡ ಅವರನ್ನು ಹೊರಗಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next