Advertisement

ಅಂಡಮಾನ್‌ ನಿಕೋಬಾರ್‌: ಎರಡು ತಾಸಲ್ಲಿ ಲಘು ತೀವ್ರತೆಯ 9 ಭೂಕಂಪ

09:28 AM Apr 02, 2019 | Sathish malya |

ಹೊಸದಿಲ್ಲಿ : ರಿಕ್ಟರ್‌ ಮಾಪಕದಲ್ಲಿ 4.7 ರಿಂದ 5.2 ಅಂಕಗಳ ತೀವ್ರತೆಯಲ್ಲಿ ದಾಖಲಾಗಿರುವ ಮಧ್ಯಮ ತೀವ್ರತೆಯ ಒಂಬತ್ತು ಭೂಕಂಪಗಳು ಇಂದು ಸೋಮವಾರ ಬೆಳಗ್ಗೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಒಟ್ಟು ಎರಡು ತಾಸುಗಳ ಅವಧಿಯಲ್ಲಿ ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.

Advertisement

4.9 ಅಂಕಗಳ ತೀವ್ರತೆಯ ಮೊದಲ ಭೂಕಂಪ ಬೆಳಗ್ಗೆ 5.14 ಹೊತ್ತಿಗೆ ಸಂಭವಿಸಿತು. ಅದಾಗಿ ಎರಡೇ ನಿಮಿಷಗಳಲ್ಲಿ ಇನ್ನೊಂದು ಭೂಕಂಪ ಸಂಭವಿಸಿತು. 9ನೇ ಹಾಗೂ ಕೊನೆಯ ಭೂಕಂಪ 6.54ರ ಹೊತ್ತಿಗೆ 5.2 ಅಂಕಗಳ ತೀವ್ರತೆಯಲ್ಲಿ ಸಂಭವಿಸಿತು ಎಂದು ಕೇಂದ್ರ ತಿಳಿಸಿದೆ.

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಭೂಕಂಪಗಳು ಸಂಭವಿಸುವುದು ಸಾಮಾನ್ಯವಾಗಿದೆ. ದಿನಕ್ಕೆ ಎರಡು ಮೂರು ಭೂಕಂಪಗಳು ಸಂಭವಿಸುವುದು ಕೂಡ ಅಸಾಮಾನ್ಯವೇನೂ ಅಲ್ಲ.

Advertisement

Udayavani is now on Telegram. Click here to join our channel and stay updated with the latest news.

Next