Advertisement

ಜಂಟಿ ಕಾರ್ಯದರ್ಶಿ ಹುದ್ದೆಗೆ ಖಾಸಗಿಯ ಗಣ್ಯರು

12:54 AM Apr 13, 2019 | mahesh |

ಹೊಸದಿಲ್ಲಿ: ಇದೇ ಮೊದಲ ಬಾರಿಗೆ ಕೇಂದ್ರ ಸರಕಾರದ ಒಂಬತ್ತು ಸಚಿವಾಲಯದ ಜಂಟಿ ಕಾರ್ಯದರ್ಶಿ ಹುದ್ದೆಗೆ ಐಎಎಸ್‌, ಐಪಿಎಸ್‌ ಹಾಗೂ ಇತರ ಅಧಿಕಾರಿಗಳನ್ನು ನೇಮಿಸುವುದರ ಬದಲಿಗೆ ಖಾಸಗಿ ವಲಯದ ಪರಿಣಿತ ವ್ಯಕ್ತಿಗಳನ್ನು ನೇಮಿಸಲಾಗಿದೆ. ಕಳೆದ ವರ್ಷದ ಜೂನ್‌ನಲ್ಲೇ ಅರ್ಜಿ ಕರೆಯಲಾಗಿತ್ತು. ಅಂಬರ್‌ ದುಬೆ (ನಾಗರಿಕ ವಿಮಾನಯಾನ), ಅರುಣ್‌ ಗೋಯಲ್‌ (ವಾಣಿಜ್ಯ), ರಾಜೀವ್‌ ಸಕ್ಸೇನಾ (ಆರ್ಥಿಕ ವ್ಯವಹಾರಗಳು), ಸುಜಿತ್‌ ಕುಮಾರ್‌ ಬಾಜಪೇಯಿ (ಪರಿಸರ, ಅರಣ್ಯ), ಸೌರಭ್‌ ಮಿಶ್ರಾ (ಹಣಕಾಸು ಸೇವೆಗಳು) ಮತ್ತು ದಿನೇಶ್‌ ಜಗದಾಳೆ (ನವೀನ ಮತ್ತು ನವೀಕರಿಸಬಹುದಾದ ಇಂಧನ) ಅವರನ್ನು ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

Advertisement

ಒಟ್ಟು 6 ಸಾವಿರ ಅರ್ಜಿಗಳ ಪೈಕಿ 89 ಜನರನ್ನು ಸಂದರ್ಶನ ನಡೆಸಿ, ಅದರಲ್ಲಿ ಒಂಬತ್ತು ಜನರನ್ನು ಯುಪಿಎಸ್‌ಸಿ ಆಯ್ಕೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next