ಟೋಕಿಯೋ : ಟೋಕಿಯೋ ಹೊರವಲಯದ ಝಮಾ ಎಂಬಲ್ಲಿ ಫ್ಲ್ಯಾಟ್ ಒಂದರಲ್ಲಿ ತಲೆ ಕಡಿಯಲ್ಟಟ್ಟ ಹಾಗೂ ಮಾಂಸ ಕಿತ್ತಿರುವ 9 ಮನುಷ್ಯ ದೇಹಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಘಟನೆ ಸಂಬಂಧ 27ರ ಹರೆಯದ ತಕಾಹಿರೊ ಶಿರಾಯಿಷಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನು ಇದೇ ವಸತಿ ಕಟ್ಟದಲ್ಲಿ ವಾಸವಾಗಿದ್ದಾನೆ.
ಅಪಾರ್ಟ್ಮೆಂಟ್ ಪ್ರವೇಶ ದ್ವಾರದ ಒಂದು ಬದಿಯಲ್ಲಿ ತಣ್ಣನೆಯ ಪೆಟ್ಟಿಗೆಯೊಂದರಲ್ಲಿ ಛೇದಿತ ಎರಡು ಶಿರಗಳು ಪೊಲೀಸರಿಗೆ ಕಂಡುಬಂದಿದ್ದವು. ಇವುಗಳ ಮೂಲವನ್ನು ಶೋಧಿಸಿದ ಪೊಲೀಸರಿಗೆ ಶಿರಚ್ಛೇದಿತ ಇನ್ನೂ 9 ಮನುಷ್ಯ ದೇಹಗಳು ಪತ್ತೆಯಾದವು. ಇವುಗಳನ್ನು ಅಪಾರ್ಟ್ಮೆಂಟ್ ಒಳಗೆ ಅನೇಕ ಕೂಲರ್ಗಳು ಮತ್ತು ಕಂಟೇನರ್ಗಳಲ್ಲಿ ಇರಿಸಲಾಗಿತ್ತು ಎಂದು ಮಾಧ್ಯಮ ವರದಿ ತಿಳಿಸಿದೆ.
ಪೊಲೀಸರು ಬಂಧಿಸಿರುವ ಆರೋಪಿ ಶಿರಾಯಿಷಿ ತನ್ನ ಈ ಭೀಭತ್ಸಕರ ಕೃತ್ಯಗಳನ್ನು ತಾನೇ ಎಸಗಿರುವುದು ಹೌದೆಂದು ಒಪ್ಪಿಕೊಂಡಿದ್ದಾನೆ.
ಶಿರಾಯಿಷಿ ಜತೆಗೆ ಈಚೆಗೆ 23ರ ಹರೆಯದ ಯುವತಿಯೊಬ್ಬಳು ಇದ್ದುದು ಪತ್ತೆಯಾಗಿತ್ತು. ಆದರೆ ಅನಂತರ ಆಕೆ ಎಲ್ಲೂ ಕಂಡುಬಂದಿರಲಲ್ಲ. ಆಕೆಯ ಸಹೋದರ ತನ್ನ ತಂಗಿ ನಿಗೂಢವಾಗಿ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಳು.