ಹಿಮಾಚಲ ಪ್ರದೇಶ : ಭೂ ಕುಸಿತದ ಪರಿಣಾಮ ಒಂಭತ್ತು ಜನರು ಸಾವನ್ನಪ್ಪಿದ್ದು ನಾಲ್ವರು ಗಾಯಗೊಂಡ ದುರಂತ ಘಟನೆ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭಾನುವಾರ (ಜು.25) ನಡೆದಿದೆ.
Advertisement
ಸಾಂಗ್ಲಾ-ಚಿತ್ತಾಕೂಲ್ ಸಮೀಪ ಗುಡ್ಡ ಕುಸಿದ ಪರಿಣಾಮ ಈ ಅವಘಡ ನಡೆದಿದೆ. ಚಿತ್ತಾಕುಲ ದಿಂದ ಸಾಂಗ್ಲಾಗೆ ಪ್ರಯಾಣಿಸುತ್ತಿದ್ದ ತೆಂಪೊ ಮೇಲೆ ಬಂಡೆಗಳು ಉರುಳಿ ಬಿದ್ದಿದ್ದು 9 ಜನರ ಮಾರಣಹೋಮಕ್ಕೆ ಕಾರಣವಾಗಿದೆ.
ಇನ್ನು ಬೆಟ್ಟದ ಮೇಲಿನ ಬೃಹದಾಕಾರಣ ಬಂಡೆಗಳು ಕುಸಿದ ಪರಿಣಾಮ ಬ್ರಿಡ್ಜ್ ಒಂದು ಮುರಿದು ಬಿದ್ದಿದೆ. ಸಮೀಪದ ಮನೆಗಳಿಗೂ ಹಾನಿಯುಂಟಾಗಿದೆ. ಈ ದುರ್ಘಟನೆ ಭಯಾನಕ ಕ್ಷಣಗಳನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸದ್ಯ ವೈರಲ್ ಆಗಿದೆ.