Advertisement

ಕಲಬುರಗಿ: 24 ಗಂಟೆ ಅವಧಿಯಲ್ಲಿ ಓರ್ವ ಕೋವಿಡ್ ಶಂಕಿತ ಸೇರಿ 9 ಸೋಂಕಿತರ ಸಾವು

05:06 PM May 03, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಓರ್ವ ಕೋವಿಡ್ ಶಂಕಿತ ಸೇರಿ ಒಂಭತ್ತು ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ.

Advertisement

ನಗರದ ಖಾಸಗಿ ಆನಂದ ಆಸ್ಪತ್ರೆಯಲ್ಲಿ ರವಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆಯವರೆಗೆ ಐವರು ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ. ರವಿವಾರ ತಡರಾತ್ರಿಯೇ ನಾಲ್ವರು ಮೃತಪಟ್ಟಿದ್ದರೆ, ಸೋಮವಾರ ಬೆಳಗ್ಗೆ ಓರ್ವ ಕೋವಿಡ್ ಸೋಂಕಿತ ಸಾವನ್ನಪ್ಪಿದ್ದಾನೆ. ಈ ಐವರ ಸಾವಿಗೆ ಆಕ್ಸಿಜನ್ ಅಭಾವ ಕಾರಣ ಎನ್ನಲಾಗಿದೆ.

ಅದೇ ರೀತಿ ಆಳಂದ ತಾಲೂಕು ಸರ್ಕಾರಿ ‌ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆಯರು ಸೇರಿ ನಾಲ್ವರು ಮೃತಪಟ್ಟಿದ್ದಾರೆ‌.‌ ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದ ಮೂವರೂ ಮಹಿಳೆಯರು ರವಿವಾರ ರಾತ್ರಿ ಮೃತಪಟ್ಟಿದ್ದಾರೆ‌. ಮತ್ತೊಬ್ಬ ವ್ಯಕ್ತಿ ಶಂಕಿತ ಕೋವಿಡ್ ನಿಂದ ಸೋಮವಾರ ಮಧ್ಯಾಹ್ನ ಸಾವನ್ನಪ್ಪಿದ್ದಾನೆ.

ಮೂವರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವ್ಯಕ್ತಿ ಆಸ್ಪತ್ರೆಗೆ ದಾಖಲಾದ ಕೆಲ ಹೊತ್ತಿನಲ್ಲಿ ಮೃತಪಟ್ಟಿದ್ದು, ಕೋವಿಡ್ ಪರೀಕ್ಷೆಗೆ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ನಾಲ್ವರು ಆರೋಗ್ಯದಲ್ಲಿ ಏರುಪೇರಾಗಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next